Home » ವಿಟ್ಲಪಿಂಡಿ ರಥೋತ್ಸವದಲ್ಲಿ ಅವಘಡ: ಕೃಷ್ಣನ ಉತ್ಸವ ಮೂರ್ತಿ ಕೆಳಗೆ ಬಿದ್ದು ಭಗ್ನ

ವಿಟ್ಲಪಿಂಡಿ ರಥೋತ್ಸವದಲ್ಲಿ ಅವಘಡ: ಕೃಷ್ಣನ ಉತ್ಸವ ಮೂರ್ತಿ ಕೆಳಗೆ ಬಿದ್ದು ಭಗ್ನ

0 comments

ಉಡುಪಿ: ಚಾತುರ್ಮಾಸದ ಹಿನ್ನೆಲೆಯಲ್ಲಿ ಉಡುಪಿಯ ಕೃಷ್ಣ ಮಠದಲ್ಲಿ ನಿನ್ನೆ ನಡೆದ ವಿಟ್ಲಪಿಂಡಿ ರಥೋತ್ಸವದ ವೇಳೆ ಅನಿರೀಕ್ಷಿತ ಅವಘಡ ಸಂಭವಿಸಿದೆ.
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ, ರಥಾರೋಹಣದ ವೇಳೆ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿಯವರ ಕೈಯಿಂದ ರಥದಲ್ಲಿದ್ದ ಶ್ರೀಕೃಷ್ಣನ ಮಣ್ಣಿನ ಉತ್ಸವ ಮೂರ್ತಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ.
ಕೆಳಗೆ ಬಿದ್ದ ಪರಿಣಾಮ ಮಣ್ಣಿನ ಉತ್ಸವ ಮೂರ್ತಿ ಭಗ್ನಗೊಂಡಿದೆ. ಉತ್ಸವದ ವೇಳೆ ನಡೆದ ಈ ಘಟನೆ ಭಕ್ತರಲ್ಲಿ ಕೆಲಕಾಲ ಆತಂಕ ಮೂಡಿಸಿತು.
ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಕ್ತರಲ್ಲಿ ಚರ್ಚೆಗೆ ಕಾರಣವಾಗಿದೆ. 

You may also like