ಉಡುಪಿ: ಉಡುಪಿ ಕಿನ್ನಿಮೂಲ್ಕಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಫ್ಯೂಸಿಮ್ ಸ್ಟೀಲ್ ಡೋರ್ ಮಳಿಗೆಯ ಉದ್ಘಾಟನೆ ಇಂದು ಜು.20 ರಂದು 10.40 ಕ್ಕೆ ಶಾಸಕ ಯಶಪಾಲ್ ಸುವರ್ಣ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಸಹಿತ ಹಲವು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.
Sponsoredಸ್ಟೀಲ್ ಗಾರ್ಡ್ ಕಿಟಕಿ ಮತ್ತು ಬಾಗಿಲುಗಳು ಸೇರಿದಂತೆ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿಧ ವಿನ್ಯಾಸದ ಸ್ಟೀಲ್ ಡೋರ್‌ಗಳು ಇಲ್ಲಿ ಲಭ್ಯವಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಫ್ಯೂಸಿಮ್ ಸ್ಟೀಲ್ ಡೋರ್ ಶೋರೂಂ ಗ್ಯಾಲ್ವಾಲ್ಯೂಮ್ ಸ್ಟೀಲ್‌ನಿಂದ ತಯಾರಿಸಿದ ಪ್ರೀಮಿಯಂ ಹಾಗೂ ಸೆಮಿ ಲಕ್ಸುರಿ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಭದ್ರತೆ, ಅಗ್ನಿ ನಿರೋಧಕ ಗುಣ, ತುಕ್ಕು ನಿರೋಧಕತೆ ಹಾಗೂ ಕಡಿಮೆ ನಿರ್ವಹಣೆ ವೆಚ್ಚದ ಕಾರಣದಿಂದ ಗ್ರಾಹಕರ ಗಮನ ಸೆಳೆಯಲಿದೆ ಎಂದು ಸಂಸ್ಥೆಯ ಪ್ರವರ್ತಕ ಜಿತೇಶ್ ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Marriage AdSponsored



