ಭಾನುವಾರ, 25 ಅಕ್ಟೋಬರ್ 2026

ವಂಶವೃಕ್ಷ ಪ್ರಮಾಣ ಪತ್ರಕ್ಕೆ ರಾಜ್ಯ ಸರಕಾರದ ಹೊಸ ಮಾರ್ಗಸೂಚಿ

ರಾಜ್ಯದಲ್ಲಿ ಆಸ್ತಿ ಹಕ್ಕು ಬದಲಾವಣೆ, ಭಾಗವಿಭಾಗ ಮತ್ತು ಕಂದಾಯ ಸೇವೆಗಳಿಗೆ ಅಗತ್ಯವಿರುದ ವಂಶವೃಕ್ಷ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಸರಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.

Sponsored

ಅರ್ಜಿದಾರರು ವಂಶವೃಕ್ಷ ಪ್ರಮಾಣ ಪತ್ರಕ್ಕಾಗಿ ಇನ್ನುಮುಂದೆ ಅರ್ಜಿ ಸಲ್ಲಿಸುವಾಗ ಪ್ರಮುಖ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ. ಕುಟುಂಬದ ಎಲ್ಲಾ ಲಭ್ಯವಿರುವ ಸದಸ್ಯರ ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಮೃತರ ಅಧಿಕೃತ ಮರಣ ಪ್ರಮಾಣ ಪತ್ರ, ಆಸ್ತಿಗೆ ಸಂಬಂಧಿಸಿದ ಆರ್‌ಟಿಸಿ ಅಥವಾ ಖಾತಾ ದಾಖಲೆಗಳ ಪ್ರತಿ ಹಾಗೂ ಸೂಕ್ತ ಮುದ್ರೆ ಹೊಂದಿದ ನೋಟರಿ ಅಫಿಡವಿಟ್‌ (ಸ್ವಯಂ ಘೋಷಣಾ ಪತ್ರ) ನೀಡುವುದು ಕಡ್ಡಾಯವಾಗಿದೆ.

Marriage AdMarriage AdSponsored

ಸಾರ್ವಜನಿಕರ ಅನುಕೂಲಕ್ಕಾಗಿ ಈ ಸೇವೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ. ನಾಡಕಚೇರಿ, ಸೇವಾಸಿಂಧು ಪೋರ್ಟಲ್‌ ಮೂಲಕ, ಅಥವಾ ಹತ್ತಿರದ ಗ್ರಾಮ ಒನ್‌, ಕರ್ನಾಟಕ ಒನ್‌ ಮತ್ತು ಬೆಂಗಳೂರು ಒನ್‌ ಕೇಂದ್ರಗಳಿಗೆ ಭೇಟಿ ನೀಡಿ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ನಂತರ ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಹಿನ್ನೆಲೆಯಲ್ಲಿ ಖುದ್ದಾಗಿ ಪರಿಶೀಲಿಸಿದ್ದಾರೆ. ಅಧಿಕಾರಿಗಳ ಪರಿಶೀಲನಾ ವರದಿ ಮತ್ತು ದಾಖಲೆಗಳ ಸತ್ಯಾಸತ್ಯತೆ ಆಧರಿಸಿ ತಹಶೀಲ್ದಾರ್‌ ಅವರು ಡಿಜಿಟಲ್‌ ಸಹಿಯೊಂದಿಗೆ ಪ್ರಮಾಣ ಪತ್ರವನ್ನು ಅನುಮೋದಿಸಲಿದ್ದಾರೆ. ಸುಳ್ಳು ಮಾಹಿತಿ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವರದಿಯಾಗಿದೆ.