Home » ಟಾಕ್ಸಿಕ್ 2,000 ಕೋ. ಗಳಿಸಿಲ್ಲಾಂದ್ರೆ ಮೀಸೆ ಬೋಳಿಸ್ತೇನೆ ಎಂದು ಚಾಲೆಂಜ್: ಅರ್ಧ ಮೀಸೆ ಹೋಯ್ತು, ಪೂರ್ತಿ ಪ್ರಚಾರ ಬಂತು!

ಟಾಕ್ಸಿಕ್ 2,000 ಕೋ. ಗಳಿಸಿಲ್ಲಾಂದ್ರೆ ಮೀಸೆ ಬೋಳಿಸ್ತೇನೆ ಎಂದು ಚಾಲೆಂಜ್: ಅರ್ಧ ಮೀಸೆ ಹೋಯ್ತು, ಪೂರ್ತಿ ಪ್ರಚಾರ ಬಂತು!

0 comments

ಬೆಂಗಳೂರು: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆದ ‘ಟಾಕ್ಸಿಕ್‌’ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಶ್ ಡಬಲ್ ಶೇಡ್‌ನಲ್ಲಿ ಮಿಂಚಿದ್ದಾರೆ.

‘ಟಾಕ್ಸಿಕ್‌’ ರಿಲೀಸ್ ವೇಳೆ ಯಶ್ ಅಭಿಮಾನಿಯೊಬ್ಬರು ‘ಟಾಕ್ಸಿಕ್’ ಚಿತ್ರ 2,000 ಕೋಟಿ ಗಳಿಸುವುದು ಪಕ್ಕ ಎಂದು ಕ್ಯಾಮೆರಾ ಮುಂದೆ ಹೇಳಿದ್ದರು.

ಒಂದು ವೇಳೆ ಅಷ್ಟು ಗಳಿಸಿಲ್ಲ ಅಂದ್ರೆ ಒಂದು ಬದಿಯ ಮೀಸೆ ಬೋಳಿಸಿಕೊಳ್ಳುತ್ತೇನೆ ಎಂದು ಚಾಲೆಂಜ್ ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್‌ ಹೊಂದಿರುವ ‘ಕೋಟೆ ಹುಡುಗ’ ಈಗ ತನ್ನ ಚಾಲೆಂಜ್‌ನ್ನು ಪೂರ್ಣಗೊಳಿಸಿದ್ದಾನೆ. ಮೀಸೆ ಇದ್ದಾಗ ಕೂಡಾ ‘ಕೋಟೆ ಹುಡುಗ’ ನಿಗೆ ಪ್ರಚಾರ ಇತ್ತು. ಈಗ ಹುಡುಗ ತನ್ನ ಬಲ ಮೀಸೆ ತೆಗೆದುಕೊಂಡಿದ್ದಾನೆ. ಈಗ ಅರ್ಧ ಮೀಸೆಯಿಲ್ಲದ ಮುಖಕ್ಕೆ ಪೂರ್ತಿ ಪ್ರಚಾರ ಸಿಗುತ್ತಿದೆ. ಟಾಕ್ಸಿಕ್ ಈ ಮೂಲಕ ಹುಡುಗನಿಗೆ ಒಳ್ಳೇದು ಮಾಡಿ ಗೆದ್ದಿದೆ.

You may also like