ಗ್ಯಾರಂಟಿ ಸೇರಿ ವಿವಿಧ ಯೋಜನೆಗಳಿಗೆ ದಲಿತರಿಗೆ ಮೀಸಲಿಟ್ಟ SCSP-TSP ಹಣವನ್ನ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕೊನೆಗೂ ಸಿಎಂ ಡಿಕೆ ಶಿವಕುಮಾರ್ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.


ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಹಣವನ್ನು ಬೇರೆ ಇಲಾಖೆ, ಯೋಜನೆಗಳಿಗೆ ಬಳಕೆ ಮಾಡಿದ್ದೇವೆ ಅಂತ ಒಪ್ಪಿಕೊಂಡರು ಎಂಬುದಾಗಿ ವರದಿಗಳು ತಿಳಿಸಿವೆ.
SCSP-TSP ಹಣ ಗ್ಯಾರಂಟಿಗೆ ಬಳಕೆ ಮಾಡ್ತಾ ಇದ್ದೀರಾ ಅಂತ ವಿಪಕ್ಷಗಳು ಆರೋಪ ಮಾಡ್ತಾ ಇದ್ದವು. ಆಗ ಸಚಿವರಾಗಿದ್ದ ಮಹಾದೇವಪ್ಪ ಸೇರಿ ಸಿಎಂ ಸರ್ಕಾರದ ಮಂತ್ರಿಗಳು ಗ್ಯಾರಂಟಿ ಸೇರಿ ವಿವಿಧ ಯೋಜನೆಗೆ SCSP-TSP ಹಣ ಬಳಕೆ ಮಾಡಿಕೊಂಡಿಲ್ಲ ಅಂತ ವಾದ ಮಾಡ್ತಾ ಇದ್ದರು. ಈಗ ಖುದ್ದು ಸಿಎಂ ಅವರೇ ಒಪ್ಪಿಕೊಂಡಿರೋದು ಸರ್ಕಾರ ದಲಿತರ ಹಣ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ ಅನ್ನೋದು ಸತ್ಯವಾಗಿದೆ.