Home » ಜಾಹಿರಾತಲ್ಲಿ ಗಣಪತಿ ಕೈಯಲ್ಲಿ ಚಿಕನ್ ಬಿರಿಯಾನಿ- ಅಂಗಡಿ ಮಾಲೀಕ ಅರೆಸ್ಟ್!!

ಜಾಹಿರಾತಲ್ಲಿ ಗಣಪತಿ ಕೈಯಲ್ಲಿ ಚಿಕನ್ ಬಿರಿಯಾನಿ- ಅಂಗಡಿ ಮಾಲೀಕ ಅರೆಸ್ಟ್!!

0 comments

ಗಣೇಶೋತ್ಸವ ಸಂಭ್ರಮ ದೇಶಾದ್ಯಂತ ಜೋರಾಗಿರುವ ಹೊತ್ತಲ್ಲೇ, ತಮಿಳುನಾಡಿನ ಬಿರಿಯಾನಿ ಅಂಗಡಿಯೊಂದರ ಜಾಹೀರಾತಲ್ಲಿ ಗಣಪನ ಕೈಗೆ ಬಿರಿಯಾನಿ ನೀಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. 

ತಮಿಳುನಾಡಿನ ತಿರುನೆಲ್ವೇಲಿ ಅಂಗಡಿಯೊಂದರ ಮುಂದೆ ಹಾಕಿದ್ದ ಜಾಹೀರಾತಿನಲ್ಲಿ ‘ಅರೇಬಿಕ್ ಸ್ಟೈಲ್ 65 ಬಿರಿಯಾನಿ – ರೂ.99’ ಅಂತ ಬರೆಯಲಾಗಿತ್ತು. ಜೊತೆಗೆ ಗಣೇಶ ಬಿರಿಯಾನಿ ಅಡುಗೆ ಮಾಡ್ತಿರುವ ಚಿತ್ರವನ್ನೂ ಹಾಕಲಾಗಿತ್ತು. ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಅಂತ ಆರೋಪಿಸಿ ದೂರು ನೀಡಲಾಗಿದೆ.ಅಂಗಡಿ ಮುಂದೆ ಹಾಕಿದ್ದ ಬ್ಯಾನರ್‌ನಲ್ಲಿ ಮೊದಕ ಹಿಡಿಯುವ ಗಣಪನ ಕೈಯಲ್ಲಿ ಬಿರಿಯಾನಿ ಅಡುಗೆ ಮಾಡ್ತಿರುವಂತೆ ತೋರಿಸಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. 

ದೂರು ಬಂದ ಬೆನ್ನಲ್ಲೇ ಪೊಲೀಸರು 30 ವರ್ಷದ ಅಂಗಡಿ ಮಾಲೀಕ ಜಯಂತ್‌ನನ್ನು ಭಾನುವಾರ ಅರೆಸ್ಟ್ ಮಾಡಿದ್ದಾರೆ. ಗಣೇಶನ ಚಿತ್ರ ಅವಮಾನಕರವಾಗಿದೆ ಎಂದು 42 ವರ್ಷದ ಸೆಲ್ವರಾಜ್ ದೂರು ನೀಡಿದ್ದರು. ಇದೀಗ ಬ್ಯಾನರ್ ಯಾರು ಮಾಡಿಸಿದ್ದು, ಯಾವಾಗ ಹಾಕಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You may also like