ಸೋಮವಾರ, 26 ಅಕ್ಟೋಬರ್ 2026
Trending

ಉಜಿರೆ ಎಸ್’ಡಿಎಂ ಕಾಲೇಜಿನಲ್ಲಿ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ‘ತಿಂಗಳ ತಿರುಳು’ ಅತಿಥಿ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ಪಡಿಸುವ ತಿಂಗಳ ತಿರುಳು ಅತಿಥಿ ಉಪನ್ಯಾಸ “ಯಕ್ಷಗಾನದಲ್ಲಿ ಮಹಿಳೆಯರ ಸಮಾನತೆ” ಕಾರ್ಯಕ್ರಮವು ಗುರುವಾರ ವೈಭವದಿಂದ ನಡೆಯಿತು.

Sponsored

ಅಧ್ಯಕ್ಷರಾಗಿ ಡಾ. ನಾಗಣ್ಣ ಡಿ.ಎ – ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರು, ಎಸ್.ಡಿ.ಎಂ (ಸ್ವಾಯತ್ತ) ಕಾಲೇಜು ಉಜಿರೆ ಮುಖ್ಯ ಅತಿಥಿಯಾಗಿ ಶ್ರೀಮತಿ ವಿದ್ಯಾ ಕೋಳ್ಯೂರು – ಪ್ರಸಿದ್ಧ ಯಕ್ಷಗಾನ ಸಂಘಟಕರು ಮತ್ತು ಮಹಿಳಾ ಕಲಾವಿದರು ಗೌರವ ಉಪಸ್ಥಿತಿಯಲ್ಲಿ ಸೋನಿಯಾ ಯಶೋವರ್ಮ,
ರಕ್ಷಾ ಪೂರನ್ ವರ್ಮ, ಉಪಸ್ಥಿತಿ: ತೃಪ್ತ ಕುಮಾರ್ ಜೈನ್, ಮುಖ್ಯಸ್ಥರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ, ಅರುಣ್ ಕುಮಾರ್ ಧರ್ಮಸ್ಥಳ, ಯಕ್ಷಗಾನ ತರಬೇತುದಾರರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ, ವಿದುಷಿ ಚೈತ್ರ ಭಟ್ – ನೃತ್ಯ ತರಬೇತುದಾರರು, ಎಸ್.ಡಿ.ಎಂ ಕಲಾಕೇಂದ್ರ ಉಜಿರೆ ಪುನೀತ್ – ಮಾನವ ಸಂಪನ್ಮೂಲ ವ್ಯವಸ್ಥಾಪಕ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ), ಉಜಿರೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು,ಶ್ರೇಯಸ್ ಪಾಳಂದೆ – ಸಂಸ್ಕೃತ ಉಪನ್ಯಾಸಕರು, ಎಸ್.ಡಿ.ಎಂ( ಸ್ವಾಯತ್ತ )ಕಾಲೇಜು ಉಜಿರೆ ಈ ಸಂಭ್ರಮದ ಸಮಯ ಶ್ರೀಮತಿ ವಿದ್ಯಾ ಕೋಳ್ಯೂರು ರವರು ಯಕ್ಷಗಾನದಲ್ಲಿ ಮಹಿಳೆಯರ ಸಮಾನತೆ ಕುರಿತು”ಯಕ್ಷಗಾನದಿಂದ ಬದುಕನ್ನು ರೂಪಿಸಬಹುದು” ಮಾತನಾಡಿದ ಅವರು, “ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ್ದರಲ್ಲಿ ಯಕ್ಷಗಾನ ಮತ್ತು ಯಕ್ಷಗಾನ ಕಲಾವಿದರ ಕೊಡುಗೆ ಅಪಾರವಾಗಿದೆ” ಎಂದು ಹೇಳಿದರು. ಯಕ್ಷಗಾನವು ಕೇವಲ ಒಂದು ಕಲಾ ಪ್ರಕಾರವಲ್ಲ, ಅದು ಜೀವನ ಪಾಠವನ್ನು ಕಲಿಸುವ ವಿಶ್ವವಿದ್ಯಾಲಯದಂತಿದೆ ಎಂದು ಅಭಿಪ್ರಾಯಪಟ್ಟರು.

Advertisement

“ಬದುಕಿನಲ್ಲಿ ಸಿಹಿ-ಕಹಿ, ಏರು-ಪೇರುಗಳು ಸಹಜ. ಅಂತಹ ಸಂದರ್ಭಗಳನ್ನು ಎದುರಿಸಿ ನಿಯಂತ್ರಿಸುವ ಶಕ್ತಿ ಯಕ್ಷಗಾನಕ್ಕೆ ಇದೆ. ವೇದಿಕೆಯ ಮೇಲೆ ಬರುವ ಪ್ರತಿಯೊಂದು ಪಾತ್ರವೂ ನಮಗೆ ಒಂದು ಸಂದೇಶ ನೀಡುತ್ತದೆ”ಎಂದು ಅವರು ವಿವರಿಸಿದರು.

ಸಮಾಜದಲ್ಲಿ ಇರುವ ಗಂಡು-ಹೆಣ್ಣು ಭೇದವನ್ನು ತೊಡೆದುಹಾಕಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಯಕ್ಷಗಾನ ಸಾರುತ್ತದೆ. ಕಲಾವಿದನಿಗೆ ಸಾಧನೆ, ಶ್ರದ್ಧೆ ಮತ್ತು ಸಮಯ ಪ್ರಜ್ಞೆ ಅತ್ಯಗತ್ಯ.”ಕಲೆ ನಮ್ಮೊಳಗೆ ಬಂದರೆ ನಾವು ಎಂದಿಗೂ ಒಂಟಿಯಾಗುವುದಿಲ್ಲ”ಎಂದು ಹೇಳಿದ ಅವರು, ಯಕ್ಷಗಾನವನ್ನು ಮಾದರಿಯಾಗಿ ಇಟ್ಟುಕೊಂಡರೆ ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.

ಇದೇ ವೇಳೆ “ಬದುಕಿನಲ್ಲಿ ಸಮಸ್ಯೆಗಳು ಬಂದಾಗ ಅವುಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿಯನ್ನು ಯಕ್ಷಗಾನ ನೀಡುತ್ತದೆ” ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದರು.

ವಿಧ್ಯಾರ್ಥಿ ಸಂಯೋಜಕರು: ಸಹನ, ತೇಜಸ್ ಪ್ರಾರ್ಥನೆ : ಸಾಕ್ಷ, ಹರ್ಷಿಣಿ, ಯಜ್ಞ, ಪವಿತ್ರ,ನಿರೂಪಣೆ : ಮನಸ್ವಿ, ಅತಿಥಿ ಪರಿಚಯ: ಸಹನ, ಸ್ವಾಗತ : ಅನನ್ಯ ಧನ್ಯವಾದ: ಅರುಣ್ ಕುಮಾರ್ ಧರ್ಮಸ್ಥಳ ನೆರವೇರಿಸಿದರು.