ಬಂಟ್ವಾಳ: ಲಕ್ಷಗಟ್ಟಲೆ ಮೌಲ್ಯದ ಗಾಂಜಾ ಡ್ರಗ್ಸ್ ಮೊಬೈಲ್ ಫೋನ್ ವಶ, ಮೂವರ ಬಂಧನ
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಪ್ರದೇಶದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇರಿ ಒಟ್ಟು ರೂ.4.90 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Sponsoredಆ.12 ರಂದು ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ ಐಪಿಎಸ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ದಾಳಿಯಲ್ಲಿ ಸುಮಾರು ರೂ.2.25 ಲಕ್ಷ ಮೌಲ್ಯದ 22.57 ಗ್ರಾಂ ಎಂಡಿಎಂಎ, 30.34 ಗ್ರಾಂ ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ಕಾರು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ.
ಪ್ರಕರಣಕ್ಕೆ ಕುರಿತಂತೆ ನಾಶೀರ್ ಹುಸೇನ್ (37), ಅಡ್ಯಾರ್ ಮಂಗಳೂರು, ಮಹಮ್ಮದ್ ಜುನೈದ್ (38) ಗೋಳ್ತಮಜಲು, ಬಂಟ್ವಾಳ ಹಾಗೂ ಮೊಹಮ್ಮದ್ ಆಫ್ರಿದಿ (24), ಕಂಕನಾಡಿ ಮಂಗಳೂರು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



