ಸೋಮವಾರ, 26 ಅಕ್ಟೋಬರ್ 2026
Trending

ಬೈಕ್ ನಿಂದ ಬಿದ್ದು ಮಗನಿಗೆ ಅಪಘಾತ- ಸಹಿಸಲಾರದೆ ತಂದೆ, ತಾಯಿ ಆತ್ಮಹತ್ಯೆ!!

ಅಪಘಾತ ಒಂದರಲ್ಲಿ ತಮ್ಮ ಮಗ ಗಾಯಗೊಂಡಿದ್ದಾನೆ ಎಂಬ ನೋವನ್ನು ಸಹಿಸಿಕೊಳ್ಳಲಾಗದೆ ಆತನ ತಂದೆ ತಾಯಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವಂತಹ ಅಮಾನುಷ ಘಟನೆಯೊಂದು ಕಾರವಾರದಲ್ಲಿ ನಡೆದಿದೆ.

Sponsored

ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ವಾಸವಿದ್ದ ವಿಜಯಾ ವೆಂಕಟೇಶ ವಡ್ಡರ್(36) ಭಾನುವಾರ ತಡ ರಾತ್ರಿ ಮನೆಯ ಪಕಾಸಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅದನ್ನು ಕಂಡ ಗಂಡ ಆಕೆಯನ್ನು ನೇಣಿನ ಕುಣಿಕೆಯಿಂದ ಇಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ವಿಜಯಾ ಆಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದದ್ದರು. ಇದರಿಂದ ಆತಂಕಗೊಂಡ ಆಕೆಯ ಗಂಡ ವೆಂಕಟೇಶ ರಾಮಚಂದ್ರ ವಡ್ಡರ್(38) ತಾನೂ ಸಾಯುತ್ತೇನೆ ಎಂದು ಹೇಳುತ್ತ ಆಸ್ಪತ್ರೆಯಿಂದಲೇ ನಾಪತ್ತೆಯಾಗಿದ್ದರು. ಮಂಗಳವಾರ ಕಾಳಿ ನದಿಯ ದಡದಲ್ಲಿ ಅವರ ಶವ ಪತ್ತೆಯಾಗಿದೆ. 

ಮನಮಿಡಿಯುವ ದುರಂತ :

ಕಾರವಾರದ ಬಂಗಾರಪ್ಪ ನಗರದ ವಿಜಯಾ ಹಾಗೂ ಉಡುಪಿ ಜಿಲ್ಲೆಯ ಮೂಲದ ವೆಂಕಟೇಶ ಶಿರವಾಡದಲ್ಲೇ ಜೀವನ ನಡೆಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು. ಒಂದುವರೆ ತಿಂಗಳ ಹಿಂದೆ ಬೈಕ್‌ನಿಂದ ಬಿದ್ದ ಅವರ 10 ವರ್ಷದ ಮಗ ಶರತ್ ತೀವ್ರವಾಗಿ ಗಾಯಗೊಂಡಿದ್ದ. ಆತತ ತಲೆಗೆ ಪೆಟ್ಟು ಬಿದ್ದಿದ್ದು, ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆ ಮುಂದುವರಿಸಲಾಗಿತ್ತು. ಶರತ್‌ಗೆ 18 ರ‍್ಷವಾದ ಮೇಲೆ ಇನ್ನೊಮ್ಮೆ ತಲೆ ಚಿಪ್ಪು ತೆಗೆದು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ತಾಯಿ ವಿಜಯಾ ಗಂಡನ ಜೊತೆ ಜಗಳಕ್ಕೆ ಇಳಿಯುತ್ತಿದ್ದಳು ಎನ್ನಲಾಗಿದೆ. ಭಾನುವಾರ ವಿಷಯ ವಿಪರೀತಕ್ಕೆ ಹೋಗಿ ಅನಾಹುತವಾಗಿದೆ. ಆದರೆ, ತಂದೆ, ತಾಯಿಯ ದುಡುಕಿನಿಂದ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ.