ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಎಂಬಂತೆ ಕೊಬ್ಬರಿಯ ದರ ಭಾರಿ ಏರಿಕೆಯಾಗಿದೆ. ಇದೀಗ ಕ್ವಿಂಟಲ್ ಕೊಬ್ಬರಿಗೆ 40,000 ಬೆಲೆ ಬಂದಿದ್ದು, ಬೆಳೆಗಾರರು ಫುಲ್ ಖುಷ್ ಆಗಿದ್ದಾರೆ.
Sponsoredಹೌದು, ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಇತ್ತೀಚೆಗಷ್ಟೇ ಕೊಬ್ಬರಿ ಧಾರಣೆ ದಾಖಲೆಯ ಏರಿಕೆ ಕಂಡಿತ್ತು. ಇದೀಗ ಶ್ರಾವಣ ಮಾಸದ ಆರಂಭದಲ್ಲೇ ಮತ್ತಷ್ಟು ದುಬಾರಿಯಾಗಿದೆ. ಇದುವರೆಗೂ 32 ಸಾವಿರ ಇದ್ದ ಕೊಬ್ಬರಿ ದರ ಕೇವಲ ಹತ್ತು ದಿನದಲ್ಲಿಯೇ ಬರೋಬ್ಬರಿ 8,000 ಏರಿಕೆ ಕಂಡಿದ್ದು 40 ಸಾವಿರ ಆಸು ಪಾಸಿನಲ್ಲಿದೆ. ಇದರಿಂದ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿದರೆ, ಇನ್ನೊಂದೆಡೆ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಪ್ರಮುಖ ತೆಂಗು ಬೆಳೆಯುವ ಜಿಲ್ಲೆಗಳಾದ ತುಮಕೂರು, ಹಾಸನ, ಮಂಡ್ಯ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಹವಾಮಾನ ವೈಪರೀತ್ಯ ಮತ್ತು ರೋಗ ಬಾಧೆಯಿಂದಾಗಿ ತೆಂಗಿನ ಇಳುವರಿ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಬರುವ ಒಣ ಕೊಬ್ಬರಿಯ ಪ್ರಮಾಣದಲ್ಲಿ ಗಣನೀಯ ಕಡಿಮೆಯಾಗಿದೆ. ಹೀಗಾಗಿ ದರ ಏರಿಕೆಯಾಗಿದೆ.




