ಭಾನುವಾರ, 25 ಅಕ್ಟೋಬರ್ 2026
Trending

ಮಹೀಂದ್ರಾ ಥಾರ್‌ಗೆ ATM ಮೆಷಿನ್ ಕಟ್ಟಿ ಕದ್ದೊಯ್ದ ಕಳ್ಳರು!!

ಸಾಮಾನ್ಯ ದರೋಡೆಕೋರರು ಎಟಿಎಂ ಅನ್ನು ಒಡೆದು ಹಣ ಕದಿಯುವುದು ಸಾಮಾನ್ಯ, ಆದರೆ ಇಲ್ಲೊಂದೆಡೆ ದುಷ್ಕರ್ಮಿಗಳ  ಗ್ಯಾಂಗ್ ನೇರವಾಗಿ ಎಟಿಎಂ ಯಂತ್ರವನ್ನೇ ಕದ್ದುಕೊಂಡು ಹೋಗಿದ್ದಾರೆ. ಅದೂ ಹೇಗಂತೀರಾ? ಮಹೀಂದ್ರಾ ಥಾರ್‌ ಕಾರಿಗೆ ಮಷಿನ್ ಕಟ್ಟಿ, ಎಳೆದು, ಕಿತ್ತು ಬಳಿಕ ಹಾಗೇ ಕೊಂಡೊಯ್ದಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Sponsored

ಒಡಿಶಾದ ಬಾಲಸೋರ್ ಜಿಲ್ಲೆಯ (Balasore district) ತುಡಿಗಾಡಿಯಾ ಬಜಾರ್ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಪ್ಪು ಮಹೀಂದ್ರಾ ಥಾರ್‌ ಕಾರಿನಲ್ಲಿ ಬಂದ ಸುಮಾರು ಐದಕ್ಕೂ ಹೆಚ್ಚು ಮಂದಿ ಎಟಿಎಂ ಕಿಯೋಸ್ಕ್‌ ಅನ್ನು ವಾಹನಕ್ಕೆ ಹಗ್ಗದಿಂದ ಕಟ್ಟಿ ಬಳಿಕ ಎಳೆದುಕೊಂಡು ಹೋಗಿದ್ದಾರೆ. ಇದರಿಂದ ಕಿಯೋಸ್ಕ್‌ನ ಪ್ರವೇಶದ್ವಾರ ತೆರೆದು ಯಂತ್ರ ಸ್ಥಳದಿಂದ ಕಿತ್ತು ಕೊಂಡು ಹೋಗಿದೆ. ಬಳಿಕ ಯಂತ್ರವನ್ನು ತಮ್ಮ ವಾಹನಕ್ಕೆ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ದೌಡಾಯಿಸಿತು. ಅಲ್ಲಿ ಯಂತ್ರವನ್ನು ಒಡೆದು ಒಳಗಿದ್ದ ನಗದನ್ನು ದೋಚಿ ಪರಾರಿಯಾಗಿದೆ.

ಈ ಇಡೀ ದರೋಡೆಯ ದೃಶ್ಯಗಳು ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಕಪ್ಪು ಬಣ್ಣದ ಥಾರ್ ಕಾರು ಎಟಿಎಂನ ಮುಂದೆ ಬಂದು ನಿಲ್ಲುವುದು, ಕಳ್ಳರು ಹಗ್ಗ ಕಟ್ಟುವುದು, ಯಂತ್ರವನ್ನು ಕಿತ್ತುಕೊಂಡು ಓಡಿಹೋಗುವುದು ಎಲ್ಲವೂ ಸಿನಿಮಾದ ಸ್ಟಂಟ್ ದೃಶ್ಯದಂತೆಯೇ ಇದೆ. ಪೊಲೀಸರು ಈ ವಿಡಿಯೋವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

https://x.com/Abhishek4media/status/2075841973232238985?ref_src=twsrc%5Etfw%7Ctwcamp%5Etweetembed%7Ctwterm%5E2075841973232238985%7Ctwgr%5Eb7c92a2055cf7f20b8adb8ee68f83e870eac0213%7Ctwcon%5Es1_c10&ref_url=http%3A%2F%2Fapi-news.dailyhunt.in%2F