ರಾಜ್ಯಮಟ್ಟದ ದೇಶಭಕ್ತಿ ಗಾಯನ ಸ್ಪರ್ಧೆ: ಸಿದ್ದಾಪುರ ಸ. ಹಿ.ಪ್ರಾ. ಶಾಲಾ ವಿದ್ಯಾರ್ಥಿನಿಯರ ತಂಡಕ್ಕೆ 7ನೇ ಸ್ಥಾನ
ಸಿದ್ದಾಪುರ: ದೇಶಭಕ್ತಿ ಗೀತೆ ರಾಜ್ಯಮಟ್ಟದ ಗಾಯನ ಸ್ಪರ್ಧೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಿದ್ದಾಪುರ ಕುಂದಾಪುರ ತಾ. ಉಡುಪಿ ಜಿಲ್ಲೆ ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಟಾಪ್-10 ವಿಭಾಗದಲ್ಲಿ 7ನೇ ಸ್ಥಾನವನ್ನು ಪಡೆದಿರುತ್ತದೆ.
Sponsoredಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಸಂಗೀತ ಮತ್ತು ಗಾಯನ ಸಮಿತಿ ಇವರು ಏರ್ಪಡಿಸಿದ ರಾಜ್ಯ ಮಟ್ಟದ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಟಾಪ್ -10 ವಿಭಾಗದಲ್ಲಿ 7ನೇ ಸ್ಥಾನವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯರ ತಂಡ ಪಡೆದಿರುತ್ತದೆ.
6ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀಬ್ರಾಹ್ಮೀ ಉಡುಪ, ಆರಾಧ್ಯ, ಆದ್ರಿಕಾ, ಸಂದ್ಯಾ,ಶ್ರೀನಿಧಿ, ಸಾನ್ವಿ, ಶ್ರೀರಕ್ಷಾ ಇವರಿಗೆ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಹಳೆ ವಿದ್ಯಾರ್ಥಿ ಸಂಘ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ ಶಾಲೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




