ಭಾನುವಾರ, 25 ಅಕ್ಟೋಬರ್ 2026
Trending

ಸಾಕು ನಿಲ್ಲಿಸಿ ಈ ನಿಮ್ಮ ನಾಟಕ – ರಾಹುಲ್​ ಗಾಂಧಿ ಹಾಗೂ ಕಾಂಗ್ರೆಸ್​ ವಿರುದ್ಧ ಸೋನಮ್​ ವಾಂಗ್​ಚುಕ್​ ಪತ್ನಿ ಕಿಡಿ

ಲಡಾಖ್ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಸ್ತುತ ನೀಟ್ ಪತ್ರಿಕೆ ಸೋರಿಕೆ ವಿರುದ್ಧದ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ಕಾಂಗ್ರೆಸ್ ಪಕ್ಷ ಮತ್ತು ನಾಯಕ ರಾಹುಲ್ ಗಾಂಧಿ ವಿರುದ್ಧ ಭಾರಿ ಅಸಮಾಧಾನ ಹೊರಹಾಕಿದ್ದಾರೆ.

Sponsored

ವಿದ್ಯಾರ್ಥಿಗಳು ಮತ್ತು ನಾಗರಿಕರ ಹೋರಾಟಗಳನ್ನು ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಪ್ರಧಾನಿ ನಿವಾಸದ ಎದುರು ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರಾಮಾಣಿಕತೆ ಇಲ್ಲ. ಇದು ಕೇವಲ ಹೈಡ್ರಾಮಾ. ಪ್ರಧಾನಿ ನಿವಾಸದ ಮುಂದೆ ಏಕೆ ಪ್ರತಿಭಟನೆ? ಜಂತರ್ ಮಂತರ್​ಗೆ ಬನ್ನಿ, ಇಲ್ಲಿ ವಿದ್ಯಾರ್ಥಿಗಳ ಜೊತೆ ಸೇರಿ ಹೋರಾಡಿ. ಈಗ ನಿಮ್ಮ ನಾಟಕವನ್ನು ನಿಲ್ಲಿಸಿ ಎಂದು ಕಿಡಿ ಕಾರಿದ್ದಾರೆ.

ಅಲ್ಲದೆ ರಾಹುಲ್ ಗಾಂಧಿ ಅವರಿಗೆ ಪ್ರಾಮಾಣಿಕತೆ ಅನ್ನೋದು ಇದ್ದರೆ ಜಂತರ್ ಮಂತರ್​ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಲಿ. ಪ್ರತಿಪಕ್ಷಗಳು ಪ್ರತ್ಯೇಕ ಪ್ರತಿಭಟನೆ ನಡೆಸುವ ಮೂಲಕ ನಾಟಕ ಮಾಡುತ್ತಿವೆ. ಈ ನಡೆ ಅತ್ಯಂತ ಕೃತಕ. ಸೋನಮ್​ ವಾಂಗ್ಚುಕ್ ಅವರ ಮನ್ನಣೆ ಮತ್ತು ವಿದ್ಯಾರ್ಥಿ ಚಳವಳಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದನ್ನು ನೋಡಿದರೆ ಜನರು ಖಂಡಿತ ಒಪ್ಪುವುದಿಲ್ಲ. ಭಾರತ ಈಗ ಎಚ್ಚೆತ್ತುಕೊಂಡಿದೆ. ಜನರನ್ನು ಯಾರೂ ಏಮಾರಿಸಲು ಸಾಧ್ಯವಿಲ್ಲ. ಇಂದಿನ ಯುವಕರು ಖಂಡಿತವಾಗಿಯೂ ಅಪ್ರಾಮಾಣಿಕ ನಾಯಕರನ್ನು ತಿರಸ್ಕರಿಸುತ್ತಿದ್ದಾರೆ ಎಂದರು.