ಶನಿವಾರ, 24 ಅಕ್ಟೋಬರ್ 2026

ಬೆಂಗಳೂರಲ್ಲಿ ಅಘಾತಕಾರಿ ಘಟನೆ – ತಡರಾತ್ರಿ ನಟಿ ನಟಿ ದಿವ್ಯಾ ಸುರೇಶ್‌ ಎದುರು ವ್ಯಕ್ತಿಯ ಅಸಭ್ಯ ವರ್ತನೆ!!

ನಟಿ ದಿವ್ಯಾ ಸುರೇಶ್ ಅವರ ಎದುರಲ್ಲಿ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು,.ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ ಕಾಮುಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ನಟಿ ದಿವ್ಯಾ ಸುರೇಶ್‌ಗೆ ಭಾನುವಾರ ರಾತ್ರಿ 11:30 ವೇಳೆ ಸಹೋದರಿಯೊಂದಿಗೆ ಕಾರಿನತ್ತ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ಯುವಕನೊಬ್ಬ ಅವರನ್ನು ಹಿಂಬಾಲಿಸಿದ್ದಾನೆ. ಬಳಿಕ ಅವರ ಬಳಿ ಅಸಭ್ಯವಾಗಿ ವರ್ತಿಸಿ, ಅಶ್ಲೀಲ ಸನ್ನೆಗಳು ಹಾಗೂ ವಿಕೃತ ಚೇಷ್ಟೆಗಳನ್ನು ಪ್ರದರ್ಶಿಸಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ.

ಯುವಕನ ವರ್ತನೆಯಿಂದ ಬೆಚ್ಚಿಬಿದ್ದ ದಿವ್ಯಾ ಸುರೇಶ್ ಮತ್ತು ಅವರ ಸಹೋದರಿ ತಕ್ಷಣವೇ ಓಡಿಹೋಗಿ ತಮ್ಮ ಕಾರಿನೊಳಗೆ ಸೇರಿಕೊಂಡಿದ್ದಾರೆ. ಆದರೆ, ಕಾರಿನೊಳಗೆ ಕುಳಿತ ಬಳಿಕವೂ ಯುವಕ ಅಲ್ಲಿಂದ ತೆರಳದೆ ಹೊರಗಡೆ ನಿಂತು ನಿರಂತರವಾಗಿ ಕಿರುಕುಳ ನೀಡುತ್ತಿದ್ದನಂತೆ. ಇಬ್ಬರು ಮಹಿಳೆಯರು ಒಂಟಿಯಾಗಿರುವುದನ್ನು ಗಮನಿಸಿ ಯುವಕ ಈ ರೀತಿ ವರ್ತಿಸಿದ್ದಾನೆ ಎಂದು ಹೇಳಲಾಗುತ್ತಿದ್ದು, ಘಟನೆಯಿಂದ ಇಬ್ಬರೂ ತೀವ್ರ ಆತಂಕಕ್ಕೊಳಗಾಗಿದ್ದಾರೆ

ಬಳಿಕ ನಟಿ ಹಾಗೂ ಆಕೆಯ ಕಸಿನ್ ಕಾರಿನೊಳಗೆ ಬಂದು ಕುಳಿತುಕೊಂಡು ಡೋರ್ ಹಾಕಿಕೊಂಡಿದ್ದಾರೆ. ಕಾರಿನೊಳಗೆ ಕುಳಿತ ಬಳಿಕವೂ ವ್ಯಕ್ತಿ ಕಾಮುಕತನ ಪ್ರದರ್ಶಿಸುತ್ತಿದ್ದ. ಕೊನೆಗೆ ದಿವ್ಯಾ ಸುರೇಶ್ ಮತ್ತು ಅವರ ಸಹೋದರಿಯ ಕಿರುಚಾಟ ಕೇಳಿದ ಸ್ಥಳೀಯರು ಹಾಗೂ ಸಾರ್ವಜನಿಕರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಯುವಕನನ್ನು ಹಿಡಿದು ತರಾಟೆಗೆ ತೆಗೆದುಕೊಂಡ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸಾರ್ವಜನಿಕರ ಆಕ್ರೋಶವನ್ನು ಕಂಡ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆಯ ವಿಡಿಯೋವನ್ನು ದಿವ್ಯಾ ಸುರೇಶ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.