ಮಂಗಳವಾರ, 27 ಅಕ್ಟೋಬರ್ 2026
Trending

ಶಿವಮೊಗ್ಗ: ಕೊಡಚಾದ್ರಿ ಬೆಟ್ಟದಲ್ಲಿ 60 ಅಡಿ ಕಂದಕಕ್ಕೆ ಬಿದ್ದ ಪ್ರವಾಸಿಗ, ರಕ್ಷಣೆ

ಶಿವಮೊಗ್ಗ: ಹೊಸನಗರ ತಾಲೂಕಿನ ವಿಶ್ವಪ್ರಸಿದ್ಧ ಕೊಡಚಾದ್ರಿ ಬೆಟ್ಟದಲ್ಲಿ ಚಾರಣಕ್ಕೆ ಬಂದಿದ್ದ ಪ್ರವಾಸಿಗರೊಬ್ಬರು ಆಯತಪ್ಪಿ ಅರುವತ್ತು ಅಡಿ ಆಳದ ಕಂದಕಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಸ್ಥಳೀಯ ಜೀಪ್‌ ಚಾಲಕರ ಸಮಯ ಪ್ರಜ್ಞೆಯಿಂದ ಪ್ರವಾಸಿಗ ಪವಾಡಸದೃಶವಾಗಿ ಪಾರಾಗಿದ್ದಾರೆ.

Sponsored

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಪ್ರದೀಪ್‌ ಗಾಯಗೊಂಡ ಪ್ರವಾಸಿಗ. ತಮ್ಮ ಕುಟುಂಬ ಸಮೇತರಾಗಿ ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಇವರು ಶಂಕರಾಚಾರ್ಯರ ಸರ್ವಜ್ಞ ಪೀಠಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ದಿಢೀರನೆ ತಲೆಸುತ್ತು ಬಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಜಾರಿದ್ದಾರೆ. ಕೂಡಲೇ ವಿಷಯ ತಿಳಿದ ಸ್ಥಳೀಯ ಜೀಪ್‌ ಚಾಲಕರು, ಕಂದಕಕ್ಕೆ ಹಗ್ಗ ಇಳಿಸಿ ಪ್ರದೀಪ್‌ರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.

Advertisement
Advertisement

ಸುದ್ದಿ ತಿಳಿದ ಬಿದನೂರು ನಗರ ಪೊಲೀಸ್‌ ಠಾಣೆಯ ಪೊಲೀಸರು ಗಾಯಾಳುವನ್ನು ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

Advertisement