Viral News: ಹಗಲು ರಾತ್ರಿ ಜಲಪಾತ ಕಾಯೋ ಭಯಾನಕ ದೆವ್ವಗಳು, ಹನಿ ನೀರು ಮುಟ್ಟಿದರೂ ಸಾವು ಖಚಿತ..
Viral News: ಈ ಭೂಮಿ ಮೇಲೆ ಎಲ್ಲರಿಗೂ ಬದುಕುವ ಹಕ್ಕಿದೆ. ಹಾಗೆ ಕಾಡುಗಳಲ್ಲಿ ಈಗಲೂ ಅನೇಕ ರೀತಿಯ ಬುಡಕಟ್ಟು ಸಮುದಾಯಗಳು ವಾಸಿಸುತ್ತಿವೆ. ಅವರು ತಾವು ವಾಸಿಸುವ ಜಾಗವನ್ನು ತುಂಬಾ ಪ್ರೀತಿಸುತ್ತಾರೆ. ಹಾಗೆ ಅದನ್ನು ಜತನದಿಂದ ಕಾಯುದುಕೊಳ್ಳುತ್ತಾರೆ.
Viral News: ಈ ಭೂಮಿ ಮೇಲೆ ಎಲ್ಲರಿಗೂ ಬದುಕುವ ಹಕ್ಕಿದೆ. ಹಾಗೆ ಕಾಡುಗಳಲ್ಲಿ ಈಗಲೂ ಅನೇಕ ರೀತಿಯ ಬುಡಕಟ್ಟು ಸಮುದಾಯಗಳು ವಾಸಿಸುತ್ತಿವೆ. ಅವರು ತಾವು ವಾಸಿಸುವ ಜಾಗವನ್ನು ತುಂಬಾ ಪ್ರೀತಿಸುತ್ತಾರೆ. ಹಾಗೆ ಅದನ್ನು ಜತನದಿಂದ ಕಾಯುದುಕೊಳ್ಳುತ್ತಾರೆ. ಈ ಕಾಡುಜನರು ಕಾಡಿನಲ್ಲಿ ಏನು ಸಿಗುತ್ತದೂ ಅಷ್ಟರಲ್ಲಿ ತೃಪ್ತಿ ಜೀವನ ನಡೆಸುತ್ತಾರೆ. ಊರಲ್ಲಿ ಬದುಕುವ ಸಾಮಾನ್ಯ ಜನರಿಗೆ ಈ ಬುಡಕಟ್ಟು ಸಮುದಾಯಗಳ ಬಗ್ಗೆ ಅಷ್ಟೇನು ಮಾಹಿತಿ ಇಲ್ಲ. ಅಂತಹ ಒಂದು ಬುಡಕಟ್ಟು ಜನಾಂಗದ ಕುರಿತು ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿದೆ.
Sponsoredಈ ವಿಷಯ ಬಂದಿರೋದು ಪಪುವಾ ನ್ಯೂಗಿನಿಯಾ ಎಂಬ ಪ್ರದೇಶದಿಂದ. ಅಲ್ಲಿ ವ್ಯಕ್ತಿಯೊಬ್ಬ ಅಲ್ಲಿನ ತೋವೈ ಬುಡಕಟ್ಟಿನ ಜನರೊಂದಿಗೆ ಕುಳಿತಿರುವ ವೀಡಿಯೋ ಇತ್ತೀಚೆಗೆ ವೈರಲ್ ಆಗಿದೆ. ಈ ಜನರು ಆ ದಟ್ಟ ಕಾನನದಲ್ಲಿರುವ ಪವಿತ್ರ ಜಲಪಾತವನ್ನು ರಕ್ಷಿಸಲು ಕುಳಿತಿದ್ದಾರಂತೆ. ಈ ಕಾಡಿಗೆ ಹೋಗಿ ಈ ಜಲಪಾತದಲ್ಲಿ ಜಲಕ್ರೀಡೆ ಆಡಬಹುದು ಎಂದುಕೊಂಡರೆ ನಿಮ್ಮ ಹೆಣ ಬೀಳೋದು ಪಕ್ಕಾ. ಹೊರಗಿನಿಂದ ಬಂದವರು ಈ ಜಲಪಾತವನ್ನು ಯಾರೂ ಮುಟ್ಟುವಂತಿಲ್ಲ..! ಹಾಗೆ ಇದನ್ನು ಕಾಯೋ ಈ ಕಾಡು ಜನರ ಗೆಟಪ್ ನೋಡಿದ್ರೆ ಭಯಾನಕವಾಗಿದೆ.
ಭಯಾನಕ ದೆವ್ವದ ರೀತಿಯಲ್ಲಿ ಮುಖವಾಡ ಹಾಗೂ ಘೋಸ್ಟ್ ಡ್ರೆಸ್ ಹಾಕಿಕೊಂಡು ಈ ಜಲಪಾತವನ್ನು ಬಹಳ ಮುತುವರ್ಜಿಯಿಂದ ಕಾಯುತ್ತಾರೆ. ಒಂದು ವೇಳೆ ಯಾರಾದರು ಈ ಜಲಪಾತಕ್ಕೆ ಇಳಿಯುವ ಪ್ರಯತ್ನ ಮಾಡಿದರೆ ಅವರು ಅಲ್ಲೇ ಖಲಾಸ್. ಈ ಬಗ್ಗೆ ವೀಡಿಯೋ ಮಾಡಿದ ವ್ಯಕ್ತಿಯ ಹೆಸರು ಡೇನಿಯಲ್. ಐದು ಕೋಟಿಗೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಈ ರೀಲ್ 5 ಕೋಟಿ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 10 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ.




