ಭಾನುವಾರ, 25 ಅಕ್ಟೋಬರ್ 2026

Puttur: ಪುತ್ತೂರು ಸಂಟ್ಯಾರ್‌ನಲ್ಲಿ ಕಾರು ಪಲ್ಟಿ, ಚಾಲಕ ಮೃತ್ಯು

Puttur ಸಂಟ್ಯಾರ್‌ನಲ್ಲಿ ಕಾರೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ನಡೆದಿದೆ.

putturu

ಪುತ್ತೂರು: ಸಂಟ್ಯಾರ್‌ನಲ್ಲಿ ಕಾರೊಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಫೆ.14ರಂದು ರಾತ್ರಿ ನಡೆದಿದೆ.

Sponsored

KA 21 P 5049 ನೋಂದಾಣಿಯ ಫಾರ್ಡ್ ಕಂಪನಿಯ ಕಾರು ಬೆಟ್ಟಂಪಾಡಿ ಕಡೆ ಹೋಗುವಾಗ ಅಪಘಾತಗೊಂಡು ಎರಡು ವಿದ್ಯುತ್ ಕಂಬಕ್ಕೆ ಬಡಿದು ತೋಟಕ್ಕೆ ಬಿದ್ದಿದೆ.

Marriage AdMarriage AdSponsored

ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತದಲ್ಲಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುಂಡೂರು ನಿವಾಸಿ ಮುರಳೀಧರ್ ಭಟ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಗೆ ಕಾಯಲಾಗುತ್ತಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿದ್ದಾರೆ.