ಶನಿವಾರ, 24 ಅಕ್ಟೋಬರ್ 2026

ಕಾಕ್ರೋಚ್‌ಗಳ ಮೇಲೆ ಪೊಲೀಸರು ಲಾಠಿಚಾರ್ಜ್‌-ಇಂಟರ್‌ನೆಟ್‌ ಸ್ಥಗಿತ

ನವದೆಹಲಿ: ಸಂಸತ್‌ ಮುತ್ತಿಗೆಗೆ ಯತ್ನಿಸಿದ ಕಾಕ್ರೋಚ್‌ ಜನತಾ ಪಾರ್ಟಿ ಸದಸ್ಯರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಲಾಠಿಚಾರ್ಜ್‌ ಬೆನ್ನಲ್ಲೇ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್‌ ಇಂಟರ್ನೆಟ್‌ ಸ್ಥಗಿತಗೊಂಡಿದೆ.

ಇಂದು ನವದೆಹಲಿಯ ಜಂತ್‌ ಮಂತರ್‌ನಿಂದ ಸಂಸತ್‌ ಭವನದತ್ತ ಚಲೋ ಸಂಸತ್‌ ಮೆರವಣಿಗೆ ಸಿಜೆಪಿ ಕರೆ ನೀಡಿತ್ತು. ಈ ಕೆರೆಯ ಬೆನ್ನಲ್ಲೇ ಸಾವಿರಕ್ಕೂ ಅಧಿಕ ಸಿಜೆಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಜಂತ್‌ ಮಂತರ್‌ನಲ್ಲಿ ಜಮಾಯಿಸಿ ಸಂಸತ್ತಿನತ್ತ ತೆರಳಲು ಮುಂದಾಗಿದ್ದು, ಆಗ ಪೊಲೀಸರು ಪ್ರತಿಭಟನಕಾರರನ್ನು ತಡೆದರು. ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಾರೆ.