ಭಾನುವಾರ, 25 ಅಕ್ಟೋಬರ್ 2026
Trending

ಪ್ರಜ್ವಲ್ ಬಳಿ ಇದ್ದ ಪೆನ್‌ಡ್ರೈವ್‌ನಲ್ಲಿ 100ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ – ಜೈಲು ಟಿವಿಯಲ್ಲಿ ವೀಕ್ಷಣೆ!!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಹಾಗೂ ಅತ್ಯಾ*ಚಾರ ಪ್ರಕರಣದ ಸಜಾ ಕೈದಿ ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಪತ್ತೆಯಾಗಿದ್ದ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳಿವೆ ಎಂದು ಎಫ್‌ಎಸ್‌ಎಲ್‌ ವರದಿಯಲ್ಲಿ  ತಿಳಿದು ಬಂದಿದೆ ಎನ್ನಲಾಗಿದೆ.

Sponsored

ಹೌದು, ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಪತ್ತೆಯಾದ ಪೆನ್‌ಡ್ರೈವ್ ಹಾಗೂ ಮೊಬೈಲ್‌ಗಳಲ್ಲಿ 173 ಫೈಲ್‌ಗಳಲ್ಲಿ ವಿಡಿಯೋಗಳಿದ್ದವು. ಇದರಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳ ಚಲನಚಿತ್ರಗಳು, ವೆಬ್‌ ಸೀರೀಸ್‌ಗಳು ಹಾಗೂ ಇತರೆ ವಿಡಿಯೋಗಳಿವೆ. ಆದರೆ ಮೊಬೈಲ್‌ನ ಫೈಲ್‌ಗಳಲ್ಲಿ ಯಾವುದೇ ಅಶ್ಲೀಲ ವಿಡಿಯೋಗಳ ಸಿಕ್ಕಿಲ್ಲ. ಆದರೆ ಪೆನ್‌ಡ್ರೈವ್‌ ನಲ್ಲಿ 100 ಅಶ್ಲೀಲ ವಿಡಿಯೋಗಳಿದ್ದವು ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಡಿಸಿರುವುದಾಗಿ ಮೂಲಗಳು ತಿಳಿಸಿವೆ.

ಆದ್ರೆ ಆಶ್ಚರ್ಯದ ಸಂಗತಿ ಅಂದ್ರೆ ಕಾರಾಗೃಹದಲ್ಲಿ ಅಳವಡಿಸಲಾಗಿದ್ದ ಎಲ್‌ಇಡಿ ಟೀವಿಗೆ ಆ ಪೆನ್‌ಡ್ರೈವ್ ಅಳವಡಿಸಿಕೊಂಡು ಅಶ್ಲೀಲ ವಿಡಿಯೋಗಳನ್ನು ಪ್ರಜ್ವಲ್‌ ವೀಕ್ಷಿಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಯಾವ ಸಮಯದಲ್ಲಿ ಪೆನ್‌ ಡ್ರೈವ್ ಬಳಸಲಾಗಿದೆ ಎಂಬುದನ್ನು ದೃಢಪಡಿಸುವಂತೆ ಮತ್ತೆ ಎಫ್‌ಎಸ್‌ಎಲ್ ತಜ್ಞರನ್ನು ಈಗ ಪೊಲೀಸರು ಕೋರಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿ ನಿಷೇಧಿತ ವಸ್ತುಗಳಾದ ಮೊಬೈಲ್ ಹಾಗೂ ಪೆನ್‌ಡ್ರೈವ್ ಬಳಕೆ ಆರೋಪದ ಮೇರೆಗೆ ಪ್ರಜ್ವಲ್ ಹಾಗೂ ಆತನ ಸೆಲ್‌ನ ಸಹಕೈದಿ ಪಶ್ಚಿಮ ಬಂಗಾಳ ಮೂಲದ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಜ್ವಲ್ ಸೆಲ್‌ನಲ್ಲಿ ಜಪ್ತಿಯಾಗಿದ್ದ ಮೊಬೈಲ್ ಹಾಗೂ ಪೆನ್‌ ಡ್ರೈವ್ ಅನ್ನು ಪರೀಕ್ಷೆ ನಡೆಸಿ ವರದಿ ನೀಡುವಂತೆ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು. ಈಗ ಪೊಲೀಸರ ಕೈಗೆ ಸೇರಿದ ಎಫ್‌ಎಸ್‌ಎಲ್‌ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.