ಶನಿವಾರ, 24 ಅಕ್ಟೋಬರ್ 2026

ಹುಟ್ಟುಹಬ್ಬಕ್ಕೆ ಮಗಳಿಗೆ ಆನೆ ದತ್ತು ಕೊಡಿಸಿದ ಶಾಸಕ ವಿನಯ್ ಕುಲಕರ್ಣಿ!!

ಶಾಸಕ ವಿನಯ್ ಕುಲಕರ್ಣಿಯವರು ತಮ್ಮ ಮಗಳ ಹುಟ್ಟು ಹಬ್ಬದ ಪ್ರಯುಕ್ತ ಆಕೆಗೆ 3 ಲಕ್ಷ ರೂಪಾಯಿ ಖರ್ಚು ಮಾಡಿ ಸಣ್ಣ ಆನೆಮರಿಯನ್ನು ದತ್ತು ಕೊಡಿಸಿದ್ದಾರೆ.

ಶಾಸಕ ವಿನಯ್ ಕುಲಕರ್ಣಿ ಅವರ ಪುತ್ರಿ ವೈಶಾಲಿಯವರ ಜನ್ಮದಿನದ ಅಂಗವಾಗಿ ಕುಟುಂಬ ಸಮೇತ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ವಿನಯ್ ಕುಲಕರ್ಣಿ ಅವರು ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ 3 ಲಕ್ಷ ರು. ಪಾವತಿಸಿ ಭಾರತೀಯ ಆನೆಯನ್ನು ದತ್ತು ಸ್ವೀಕರಿಸಿದ್ದಾರೆ. ಈ ಮಹತ್ವದ ಕೊಡುಗೆಯನ್ನು ಮೃಗಾಲಯ ಪ್ರಾಧಿಕಾರವು ಶ್ಲಾಘಿಸಿದೆ

ಪ್ರಾಣಿಗಳ ಸಂರಕ್ಷಣೆ ಹಾಗೂ ವನ್ಯಜೀವಿಗಳ ಅದಕ್ಕೆ ಜನರಲ್ಲಿ ಜಾಗೃತಿ  ಮೂಡಿಸಿವ ಉದ್ದೇಶದಿಂದ ಮೃಗಾಲಯದ ವತಿಯಿಂದ ಪ್ರಾಣಿಗಳ ದತ್ತು ಸ್ವೀಕಾರ ತೆಗೆದುಕೊಳ್ಳುವ ಕ್ರಮ ಜಾರಿಯಲ್ಲಿದೆ. ಈ ಯೋಜನೆ ಅಡಿಯಲ್ಲಿ ವಿನಯ್ ಕುಲಕರ್ಣಿ ಅವರು ಆನೆಯನ್ನು ಬಿಟ್ಟು ಪಡೆದಿದ್ದಾರೆ.