ಬ್ರಿಟಿಷ್-ನೈಜೀರಿಯಾದ ಉದ್ಯಮಿ ಹಾಗೂ ಜಾಲತಾಣದ ಪ್ರಭಾವಿ ಆಗಿರುವ ಇಘೋ ಉಬಿರಿಬೊ (43) ಎಂಬಾತ ಲೈಂಗಿಕ ಸುಖ ಹೆಚ್ಚಿಸಿಕೊಳ್ಳಲು ಕಾಸ್ಮೆಟಿಕ್ ಶಿಶ್ನ ಹಿಗ್ಗುವಿಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಕೆಲ ದಿನಗಳಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.


ಪತ್ನಿ ಡೇನಿಯಲ್ ಸಿಂಬಾ ಅಲೆನ್ ಅವರೊಂದಿಗೆ ಬ್ಯಾಂಕಾಕ್‌ಗೆ ತೆರಳಿದ್ದ ಉಬಿರಿಬೊ, ಅಲ್ಲಿನ ಆಸ್ಪತ್ರೆಯೊಂದರಲ್ಲಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ಪತ್ನಿಯಿಂದ ಮಸಾಜ್ ಪಡೆಯುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೆಲವೇ ಸಮಯದಲ್ಲಿ ಅವರು ಎರಡು ಬಾರಿ ಮೂರ್ಛೆ ಹೋಗಿದ್ದು, ತಕ್ಷಣ ಆಂಬ್ಯುಲೆನ್ಸ್ ಮೂಲಕ ಬ್ಯಾಂಕಾಕ್‌ನ ಸುಖುಮ್ವಿಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು
ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಶ್ವಾಸಕೋಶದಲ್ಲಿನ ರಕ್ತನಾಳಕ್ಕೆ ಅಡ್ಡಿಯಾಗಿರುವ ಪಲ್ಮನರಿ ಎಂಬಾಲಿಸಮ್ ಸಮಸ್ಯೆಯನ್ನು ಪತ್ತೆಹಚ್ಚಿದರು. ಬಳಿಕ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ವೈದ್ಯರು 100 ನಿಮಿಷಗಳಿಗೂ ಹೆಚ್ಚು ಕಾಲ ಸಿಪಿಆರ್ ನಡೆಸಿದರೂ ಉಬಿರಿಬೊ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಾರ್ಚ್ 6ರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಉಬಿರಿಬೊ ಅವರ ಶ್ವಾಸಕೋಶದಲ್ಲಿ ಪತ್ತೆಯಾದ ಸೆಲ್ಯುಲಾರ್ ವಸ್ತುವು ಶಸ್ತ್ರಚಿಕಿತ್ಸೆಯ ವೇಳೆ ಇಂಜೆಕ್ಷನ್ ಮೂಲಕ ನೀಡಲಾಗಿದ್ದ ಹೈಲುರಾನಿಕ್ ಆಯಸಿಡ್‌ಗೆ ಹೊಂದಿಕೆಯಾಗಿರುವುದು ಕಂಡುಬಂದಿದೆ.
ಇನ್ನೂ ಈ ಉಬಿರಿಬೊ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬುದು ವರದಿಯಲ್ಲಿ ಬಹಿರಂಗವಾಗಿದೆ. ಹೈಪ್‌ಮಾಸ್ಟರ್‌ನ ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದರ ಪ್ರಕಾರ, ಅವರು ಲಾಸ್ ಏಂಜಲೀಸ್‌ನ ಕ್ರೆನ್‌ಶಾ ಪ್ರದೇಶದಲ್ಲಿ ಸುಮಾರು 1.1 ಮಿಲಿಯನ್ ಡಾಲರ್ ಮೌಲ್ಯದ ಮನೆ ಹಾಗೂ ಲಂಡನ್‌ನಲ್ಲಿ ಸುಮಾರು 6 ಲಕ್ಷ ಡಾಲರ್ ಮೌಲ್ಯದ ಅಪಾರ್ಟ್‌ಮೆಂಟ್ ಹೊಂದಿದ್ದರು ಎನ್ನಲಾಗಿದೆ. ದುಬಾರಿ ಕಾರುಗಳು, ವಿಹಾರ ನೌಕೆಗಳು ಹಾಗೂ ಡಿಸೈನರ್ ಉಡುಪುಗಳ ಮೂಲಕ ಅವರು ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನಾಗಿದೆ.

