LPG ಗ್ರಾಹಕರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಈವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಮರುಬುಕಿಂಗ್ ಮಾಡಲು ಇದ್ದ 45 ದಿನಗಳ ಸುದೀರ್ಘ ಕಾಯುವಿಕೆ ಅವಧಿಯನ್ನು ಇದೀಗ 25 ದಿನಗಳಿಗೆ ಇಳಿಸಿ ಆದೇಶಿಸಿದೆ.


ಈ ಹೊಸ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರಲು ತೈಲ ಮಾರುಕಟ್ಟೆ ಸಂಸ್ಥೆಗಳಿಗೆ (OMC) ಸೂಚಿಸಲಾಗಿದ್ದು, ಇನ್ಮುಂದೆ ನಗರ ಮತ್ತು ಹಳ್ಳಿಗಳೆರಡರಲ್ಲೂ ಒಂದೇ ಮಾದರಿಯ 25 ದಿನಗಳ ನಿಯಮ ಅನ್ವಯವಾಗಲಿದೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಪ್ರಕಟಿಸಿದ್ದಾರೆ
ಇನ್ನೂ ಗ್ಯಾಸ್ ಸಂಪರ್ಕದ ಇ-ಕೆವೈಸಿ (E-Kyc) ಪೂರ್ಣಗೊಳಿಸಲು ಸೆಪ್ಟೆಂಬರ್ 7, ಸೋಮವಾರ ಕೊನೆಯ ದಿನವಾಗಿದೆ. ಇನ್ನೂ ಇ-ಕೆವೈಸಿ ಮಾಡಿಸಿಕೊಳ್ಳದ ಗ್ರಾಹಕರು ಯಾವುದೇ ವಿಳಂಬ ಮಾಡದೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವಂತೆ ಸೂಚಿಸಲಾಗಿದೆ.