ಕರ್ನಾಟಕದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಆಗಸ್ಟ್ 2 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ನಂತರ ರಾಜ್ಯದ ಕಾನ್ಸ್‌ಟೇಬಲ್ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ರಾಜ್ಯ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಈ ಪೈಕಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Sponsoredಪೊಲೀಸ್ ಕಾನ್ಸ್‌ಸ್ಟೇಬಲ್ ಲಿಖಿತ ಪರೀಕ್ಷೆಯಲ್ಲಿ ಹಿಜಾಬ್ ಹಾಕಲು ಅವಕಾಶವಿಲ್ಲ. ಧಾರ್ಮಿಕ ಉಡುಪುಗಳ ಕುರಿತು ಗೊಂದಲ ಆಗದಂತೆ ಮೊದಲೇ ನೋಡಿಕೊಳ್ಳಲಾಗುವುದು ಎಂದು ಪ್ರಿಯಾಂಕಾ ಖರ್ಗೆ ಸ್ಪಷ್ಟ ಪಡಿಸಿದ್ದಾರೆ. ಪರೀಕ್ಷೆ ಸಮಯದಲ್ಲಿ ಯಾವು ಉಡುಪು ಹಾಕಬಹುದು ಯಾವ ಉಡುಪು ಹಾಕಬಾರದು ಎಂದು ಪ್ರವೇಶ ಪತ್ರದಲ್ಲಿ ಹಾಕಿರುತ್ತೇವೆ.
Marriage AdSponsored24 ಗಂಟೆ ಮುಂಚೆ ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸೇಶನ್ ಮಾಡಲಾಗುತ್ತದೆ. ಮೊಬೈಲ್ ಬಳಕೆಯನ್ನು ನಿಯೋಜಿತ ಸಿಬ್ಬಂದಿ ಕೂಡಾ ಮಾಡುವಂತಿಲ್ಲ. ಜನಿವಾರ, ಶಿವದಾರ, ಉಡುದಾರ, ಮಾಂಗಲ್ಯ ಸರ, ಮೂಗುತಿ, ಕುಂಕುಮ ಉಂಗುರ ತಾಯತಾ ಹಾಕುವುದು ಸೇರಿದಂತೆ ಎಲ್ಲಾ ವಸ್ತುಗಳ ಬಳಕೆ ಕುರಿತು ಮೊದಲೇ ತಿಳಿಸಲಾಗುವುದು. ಕೊನೆ ಕ್ಷಣದ ಗೊಂದಲಕ್ಕೆ ಯಾವುದೇ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುವುದು. ಎರಡುವರೆ ಗಂಟೆ ಮುಂದೆ ಬಂದು ಇವುಗಳನ್ನು ಚೆಕ್ ಮಾಡಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಆಗಸ್ಟ್ 2 ರಂದು ಪೊಲೀಸ್ ಪೇದೆ ಲಿಖಿತ ಪರೀಕ್ಷೆ ನಡೆಯಲಿದೆ. ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಶೂ, ಟೋಪಿ, ಕಿವಿ, ತಲೆ ಹಾಗೂ ಮುಖವನ್ನು ಮುಚ್ಚುವ ಯಾವುದೇ ಬಟ್ಟೆ ಹಾಕುವಂತಿಲ್ಲ. ಇನ್ನು ಹೆಚ್ಚಿನ ಜೇಬುಗಳಿರುವ ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ. ಪರೀಕ್ಷಾ ಕೊಠಡಿಯೊಳಗೆ ಆಹಾರ ಪದಾರ್ಥಗಳು, ನೀರಿನ ಬಾಟಲಿ, ಯಾವುದೇ ಪಾನೀಯ, ಚೀಟಿ ಅಥವಾ ಕಾಗದ, ಪುಸ್ತಕಗಳು, ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಸ್ಕೆಲ್, ನೋಟ್‌ಪ್ಯಾಡ್, ರಬ್ಬರ್ ನಿಷೇಧಿಸಲಾಗಿದೆ.




