Home » ‘ಪ್ರಚಾರ ಬಿಟ್ಟು ಜನರ ಸಮಸ್ಯೆಗಳಿಗೆ ಉತ್ತರಿಸಿ’: ಸಿಎಂ ಡಿಕೆಶಿಗೆ ನಿಖಿಲ್‌ ಟಾಂಗ್

‘ಪ್ರಚಾರ ಬಿಟ್ಟು ಜನರ ಸಮಸ್ಯೆಗಳಿಗೆ ಉತ್ತರಿಸಿ’: ಸಿಎಂ ಡಿಕೆಶಿಗೆ ನಿಖಿಲ್‌ ಟಾಂಗ್

0 comments
Nikhil Kumaraswamy

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ರಿಯಲ್ ಎಸ್ಟೇಟ್ ಆಡಳಿತದ ಗುಂಗಿನಿಂದ ಹೊರಬಂದು ಕೊನೆಗೂ ಪ್ರಜಾಸೇವೆ ನೆನಪಿಸಿಕೊಂಡಿದ್ದಕ್ಕೆ ಧನ್ಯವಾದ” ಎಂದು ವ್ಯಂಗ್ಯವಾಡಿದ್ದಾರೆ.

‘ಬ್ರಾಂಡ್ ಬೆಂಗಳೂರು’ ಮಾದರಿಯ ಪ್ರಚಾರದ ಗಿಮಿಕ್ ಬಿಟ್ಟು ಜನರ ಸಮಸ್ಯೆಗಳಿಗೆ ಉತ್ತರಿಸಿ ಎಂದು ಆಗ್ರಹಿಸಿರುವ ನಿಖಿಲ್, ಗೃಹಲಕ್ಷ್ಮಿ ಅನುದಾನ, ಶಕ್ತಿ ಯೋಜನೆಯ ಬಾಕಿ, ಸಾಮಾಜಿಕ ಭದ್ರತಾ ಪಿಂಚಣಿ, ರೈತರ ಪರಿಹಾರ ಹಾಗೂ ಬೆಂಗಳೂರು ರಸ್ತೆ ಗುಂಡಿಗಳ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ.

ಪ್ರಚಾರಕ್ಕಷ್ಟೇ ಸೀಮಿತವಾಗದೆ ಜನಪರ ಆಡಳಿತ ನೀಡಿ. ‘ಸೂಪರ್ ಸಿಎಂ’ ಸುರ್ಜೇವಾಲ ಅವರು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಮಾಡಲಿ ಎಂದು ಅವರು ಕುಟುಕಿದ್ದಾರೆ.

You may also like