Home » 36 ಸಾವಿರ ಅಡಿ ಎತ್ತರದಲ್ಲಿ ಏರ್ ಇಂಡಿಯಾ ವಿಮಾನಕ್ಕೆ ತಾಂತ್ರಿಕ ದೋಷ: 24 ಪ್ರಯಾಣಿಕರಿಗೆ ಗಾಯ

36 ಸಾವಿರ ಅಡಿ ಎತ್ತರದಲ್ಲಿ ಏರ್ ಇಂಡಿಯಾ ವಿಮಾನಕ್ಕೆ ತಾಂತ್ರಿಕ ದೋಷ: 24 ಪ್ರಯಾಣಿಕರಿಗೆ ಗಾಯ

0 comments

ನವದೆಹಲಿ: ಫುಕೆಟ್‌ನಿಂದ ನವದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ 36 ಸಾವಿರ ಅಡಿ ಎತ್ತರದಲ್ಲಿ ಮೂರು ಹೈಡ್ರಾಲಿಕ್ ಸಿಸ್ಟಂಗಳು ಕೆಲವೇ ಸೆಕೆಂಡುಗಳ ಅಂತರದಲ್ಲಿ ಸ್ಥಗಿತಗೊಂಡು ಆತಂಕ ಸೃಷ್ಟಿಸಿತು.

ಆಟೋಪೈಲಟ್ ಸಂಪರ್ಕ ಕಡಿತಗೊಂಡು ವಿಮಾನದಲ್ಲಿ ತೀವ್ರ ಏರುಪೇರು ಉಂಟಾದ ಪರಿಣಾಮ 24 ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಳಿಕ ಹೈಡ್ರಾಲಿಕ್ ವ್ಯವಸ್ಥೆಗಳು ಹಂತ ಹಂತವಾಗಿ ಕಾರ್ಯನಿರ್ವಹಿಸಲು ಆರಂಭಿಸಿದ ಪರಿಣಾಮ ವಿಮಾನವನ್ನು ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು.

ಲ್ಯಾಂಡಿಂಗ್ ಬಳಿಕ ಮುಖ್ಯ ಪೈಲಟ್‌ ನಡೆಸಿದ ಪರೀಕ್ಷೆಯಲ್ಲಿ ನಿಷೇಧಿತ ಮನೋ-ಸಕ್ರಿಯ ಪದಾರ್ಥ ಪತ್ತೆಯಾಗಿದ್ದು, ಅವರನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ಘಟನೆ ಕುರಿತು AAIB ತನಿಖೆ ನಡೆಸುತ್ತಿದ್ದು, ಬ್ಲಾಕ್ ಬಾಕ್ಸ್ ಪರಿಶೀಲಿಸಲಾಗುತ್ತಿದೆ.

You may also like