ಸೋಮವಾರ, 26 ಅಕ್ಟೋಬರ್ 2026
Trending

ಎಕ್ಸೆಲ್ ಟೆಕ್ನೊ ಸ್ಕೂಲ್ ನಲ್ಲಿ ನೇಚರ್ ನರ್ಚರ್ ಡೇ

Advertisement

ಅಳಿವಿನಂಚಿನಲ್ಲಿರುವ ಪ್ರಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಳೆಹರೆಯದಲ್ಲೇ ಜಾಗೃತಿ ಮೂಡಿಸುವ ಸದುದ್ದೇಶದಿಂದ ‘ಎಕ್ಸೆಲ್ ಟೆಕ್ನೋ ಶಾಲೆ ಗುರುವಾಯನಕೆರೆ’ ಇಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿಗಳಿಗೆ “Nature Nurture Day” ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯ್ತು. ಸಂಯೋಜಕಿ ಶ್ರೀಮತಿ ಲೀನಾ ಫ್ಲೋರಿನ್ ಪಿಂಟೋರವರ ಸಾರಥ್ಯ ಹಾಗೂ ಮಾರ್ಗದರ್ಶನದಂತೆ ಮಕ್ಕಳು ಹಸಿರು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದರು. ಜೊತೆಗೆ ತಂದಿದ್ದ ಹಸಿರು ಬಣ್ಣದ ವಸ್ತುಗಳು ಹಾಗೂ ಆಟಿಕೆಗಳನ್ನು ಪ್ರದರ್ಶಿಸಿದರು. ಕಾಡುಮನುಷ್ಯ ಪಾತ್ರಧಾರಿಗಳು ಗುಹಾಕೃತಿಯಿಂದ ನುಸುಳುತ್ತಾ ಹೊರಬಂದು ಗಮನ ಸೆಳೆದರು.

Sponsored

ಪ್ರತೀ ವಿಭಾಗದಲ್ಲೂ ಆಯ್ದ ವಿದ್ಯಾರ್ಥಿಗಳಿಂದ ಪಾತ್ರಭಿನಯ ಹಾಗೂ ಭಾಷಣ ಮಾಡಿಸಲಾಯ್ತು. ಸಂಯೋಜಕಿಯವರು ಪ್ರಕೃತಿಯ ಮಹತ್ವದ ಬಗ್ಗೆ ಅರಿವು ಮೂಡಿಸಿ, ಮುಂಬರುವ ದಿನಗಳಲ್ಲಿ ಪ್ರತೀ ಮುಂಜಾನೆಯ ಪ್ರಾರ್ಥನಾ ಸಭೆಯಲ್ಲಿ ಮಕ್ಕಳು ಪ್ರಕೃತಿ ಪರಿಸರದ ಬಗ್ಗೆ ಮಾತನಾಡಬೇಕಾಗಿ ತಿಳಿಸಿದರು. ಶಿಕ್ಷಕಿಯರಾದ ಗೀತಾ, ಜೋಸ್ಲಿಟಾ ಲೋಬೊ, ಪೂರ್ಣಿಮಾ ಆಚಾರ್ಯ, ಲವೀನಾ, ಪ್ರೇಮ, ವಿಲ್ಮಾ ಚೇತನಾ ಹಾಗೂ ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.ಹಸಿರುಮಯ ಕಾರ್ಯಕ್ರಮದ ಯಶಸ್ವಿಯಲ್ಲಿ ಪೋಷಕರ ಆಸಕ್ತಿ ಹಾಗೂ ಪರಿಶ್ರಮ ಶ್ಲಾಘನಾರ್ಹವಾಗಿತ್ತು.

Advertisement
Advertisement
Advertisement
div class="ere-sticky">