ಮಂಗಳವಾರ, 27 ಅಕ್ಟೋಬರ್ 2026
Trending

ಮಂಗಳೂರು : ಬನ್ಸ್, ದೋಸೆ ಎಲ್ಲಾ ತಿಂದೆ, ಯಾರೂ ಭಯಪಡಬೇಡಿ – ಹೀಗ್ಯಾಕಂದ್ರು ಸಿಎಂ ಡಿಕೆಶಿ?

ಇದೆ ಮೊದಲ ಬಾರಿ ಮಂಗಳೂರಲ್ಲಿ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಸಿಎಂ ಡಿ.ಕೆ. ಶಿವಕುಮಾರ್‌ ಅವರು ಮಹಾತ್ಮಗಾಂಧಿ ಅವರು ಉಳಿದಿದ್ದ ಮನೆಗೆ ಭೇಟಿ ನೀಡಿದರು. ಬಳಿಕ ಅಲ್ಲಿ ಮಂಗಳೂರು ಸ್ಪೆಷಲ್ ಮಂಗಳೂರು ಬನ್ಸ್, ದೋಸೆ ಎಲ್ಲಾ ಸವಿದರು.

Sponsored

ಬಳಿಕ ಮಾಧ್ಯಮದವರ  ಜೊತೆಗೆ ಮಾತನಾಡಿದ ಅವರು ಬಿಜೆಪಿ ನಾಯಕರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ. “ಯಾರೂ ಗಾಬರಿಯಾಗಬೇಕಿಲ್ಲ. ನಮಗೆ ಜನರ ಬದುಕು ಮುಖ್ಯ,ನಾವು ಜನರ ಬದುಕಿನ ಮೇಲೆ ರಾಜಕೀಯ ಮಾಡುವವರು. ಭಾವನೆಗಳ ಮೇಲೆ ರಾಜಕೀಯ ಮಾಡುವವರಲ್ಲ.ಯಾರೂ ಗಾಬರಿ ಪಡಬೇಕಿಲ್ಲ ಎಲ್ಲರ ಚಿಂತನೆಯನ್ನೊಳಗೊಂಡು ನಮ್ಮ ಸರಕಾರ ಕೆಲಸ ಮಾಡಲಿದೆ” ಎಂದು ಸಿಎಂ ಹೇಳಿದರು.

Advertisement
Advertisement

ಅಲ್ಲದೆ “ಬೆಳಿಗ್ಗೆಯೇ ಮಹಾತ್ಮಾ ಗಾಂಧಿಯವರು ತಂಗಿದ್ದ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಮಂಗಳೂರಿನ ಪ್ರಸಿದ್ಧ ಬನ್ಸ್ ಹಾಗೂ ದೋಸೆ ತಿಂಡಿ ತಿಂದಾಯ್ತು, ತುಂಬ ಸಂತೋಷವಾಗಿದೆ. ಈಗ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿಗೆ ಕರೆದುಕೊಂಡು ಹೋಗುತ್ತಾರೋ ಅಲ್ಲಿಗೆ ಹೋಗುತ್ತೇನೆ” ಎಂದರು.

Advertisement