ಮಂಗಳವಾರ, 27 ಅಕ್ಟೋಬರ್ 2026
Trending

ಸಿಎಂ ಡಿಕೆಶಿ ಡಿನ್ನರ್‌ ಮೀಟಿಂಗ್‌-ಚಪ್ಪಲಿ ಧರಿಸಿ ದೈವರಾಧನೆ ವಸ್ತುವಿಗೆ ಅವಮಾನ-ಬಿಜೆಪಿ ಕಿಡಿ

ಮಂಗಳೂರು: ಮುಖ್ಯಮಂತ್ರಿ ಡಿಕೆಶಿವಕುಮಾರ್‌ ಅವರ ಆಪ್ತ ಸಮ್ಮಿಲನ ಕಾರ್ಯಕ್ರಮದಲ್ಲಿ ತುಳುನಾಡಿನ ದೈವಾರಾಧನೆಯ ಪವಿತ್ರ ಗಗ್ಗರವನ್ನು ಪ್ರದರ್ಶನಕ್ಕೆ ಇಟ್ಟಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಈ ಘಟನೆಯನ್ನು ತೀವ್ರವಾಗಿ ಖಂಡನೆ ಮಾಡಿದ್ದು, ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

Sponsored

ಮಂಗಳೂರಿನ ತಣ್ಣೀರುಬಾವಿ ಬೀಚ್‌ನಲ್ಲಿ ಔತಣಕೂಟ ಆಯೋಜನೆ ಮಾಡಲಾಗಿದ್ದು, ಈ ವೇಳೆ ಡಿಕೆಶಿ ಅವರನ್ನು ಆಕರ್ಷಿಸಲು ತುಳುನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಲ್ಲಿ ಪವಿತ್ರ ಗಗ್ಗರವನ್ನೂ ಪ್ರದರ್ಶನಕ ವಸ್ತುವಾಗಿ ಇಡಲಾಗಿತ್ತು.

Advertisement
Advertisement

ಈ ಘಟನೆಗೆ ಕುರಿತಂತೆ ಪ್ರಕಟಣೆ ಬಿಡುಗಡೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ, ಕಾಂಗ್ರೆಸ್‌ ನಾಯಕರ ನಡೆಎ ಕಟು ಶಬ್ದಗಳಲ್ಲಿ ವಿರೋಧ ಮಾಡಿದೆ. ದೈವಾರಾಧನೆಯ ಅತ್ಯಂತ ಪವಿತ್ರ ವಸ್ತುವಾದ ಗಗ್ಗರವನ್ನು ಪ್ರದರ್ಶನದ ಅಥವಾ ಮನರಂಜನೆಯ ವಸ್ತುವನ್ನಾಗಿ ಬಳಕೆ ಮಾಡಿರುವುದು ತುಳುನಾಡಿನ ಜನರ ಧಾರ್ಮಿಕ ಭಾವನೆಗೆ ಎಸಗಿದ ದ್ರೋಹ ಎಂದು ಬಿಜೆಪಿ ಆರೋಪ ಮಾಡಿದೆ. ನಾಯಕರು ಕಾಲಿಗೆ ಚಪ್ಪಲಿ ಧರಿಸಿಯೇ ಗಗ್ಗರವನ್ನು ಮುಟ್ಟಿ ವೀಕ್ಷಣೆ ಮಾಡಿರುವುದು ದೈವಿಕ ಪರಂಪರೆಗೆ ಮಾಡಿದ ಅಪಚಾರ ಎಂದು ಕಿಡಿಕಾರಿದೆ.

Advertisement