ಭಾನುವಾರ, 25 ಅಕ್ಟೋಬರ್ 2026

ಮಂಗಳೂರು; ಚರಂಡಿಗೆ ಕೋಪದಿಂದ ಕಾರಿನ ಕೀ ಎಸೆದ ಪ್ರೇಯಸಿ! ಕಡಬದಲ್ಲಿ ಯುವಕ ಪಟ್ಟ ಫಜೀತಿ

Image Credit: Asianet Suvarna Kannada

ಮಂಗಳೂರು: ಜುಲೈ 24 ರಂದು ಕಡಬದ ಸಂತೆಕಟ್ಟೆ ಬಳಿ ಹೈಡ್ರಾಮವೊಂದು ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Sponsored

ವರದಿಯ ಅನುಸಾರ, ಈಶ್ವರಮಂಗಲದ ಯುವಕನೊಬ್ಬ ಕಡಬದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪ್ರೇಯಸಿ ಎನ್ನಲಾದ ಯುವತಿಗೆ ಜನ್ಮದಿನದ ಶುಭಾಶಯ ಕೋರಲು ಸಂಭ್ರಮದಿಂದ ಬಂದಿದ್ದು, ಇದಕ್ಕಾಗಿ ಆತ ತನ್ನ ಸ್ನೇಹಿತನ ಬಳಿ ಸ್ವಿಫ್ಟ್‌ ಕಾರನ್ನು ಪಡೆದುಕೊಂಡು, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕಡಬಕ್ಕೆ ಬಂದಿದ್ದ. ಸಂತೆಕಟ್ಟೆ ಬಳಿ ಕಾರನ್ನು ನಿಲ್ಲಿಸಿ, ಆಕೆ ಕೆಲಸ ಮಾಡುತ್ತಿದ್ದ ಕಚೇರಿಯ ಮೊದಲ ಮಹಡಿಯಲ್ಲಿ ಇಬ್ಬರೂ ಭೇಟಿಯಾಗಿದ್ದು, ಚೆನ್ನಾಗಿಯೇ ಮಾತನಾಡುತ್ತಿದ್ದ ಇವರಿಬ್ಬರ ಮಧ್ಯೆ ಸಣ್ಣ ವಿಷಯಕ್ಕೆ ಚಕಮಕಿ ನಡೆದಿದೆ.

Marriage AdMarriage AdSponsored

ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆ ಆಗಿದೆ. ಕೋಪದಿಂದ ಯುವತಿ ಏಕಾಏಕಿ ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಬಲವಂತದಿಂದ ಕಸಿದುಕೊಂಡು ಕೊಳಚೆ ನೀರು, ಹೂಳಿನಿಂದ ಕೂಡಿದ್ದ ಚರಂಡಿಯ ಕಡೆಗೆ ಎಸೆದುಬಿಟ್ಟಿದ್ದಾಳೆ. ಯುವಕ ಗಲಿಬಿಲಿಗೊಂಡಿದ್ದಾನೆ. ಯುವತಿ ಅಲ್ಲಿಂದ ಹೊರಟು ಹೋಗಿದ್ದಾಳೆ. ಕೀ ಇಲ್ಲದೆ ಕಾರನ್ನು ಅಲ್ಲಿಂದ ಕದಲಿಸಲೂ ಆಗದೆ, ಏನು ಮಾಡಬೇಕೆಂದು ತೋಚದೆ ಯುವಕ ಅಸಹಾಯಕನಾಗಿ ಚರಂಡಿಯತ್ತ ಓಡಿದ್ದಾನೆ.

ಮಧ್ಯಾಹ್ನ 2.30 ರ ಸುಮಾರಿಗೆ ಚರಂಡಿಯ ಕೆಸರು ನೀರಿನಲ್ಲಿ ಯುವಕ ಒಬ್ಬನೇ ಕೈ ಹಾಕಿ ಕೀ ಹುಡುಕಲು ಆರಂಭಿಸಿದ್ದು, ಆತನ ಒದ್ದಾಟ ಕಂಡು ಸ್ಥಳೀಯರು ಸಾರ್ವಜನಿಕರು ಸಹಾಯಕ್ಕೆ ಬಂದಿದ್ದಾರೆ. ನೂರಾರು ಜನ ಕೂಡಲೇ ಕುತೂಹಲದಿಂದ ಸ್ಥಳದಲ್ಲಿ ಜಮಾಯಿಸಿದ್ದಾರೆ. ಕೊಳಚೆ ನೀರು, ಹೂಳು ಎನ್ನದೆ ಎಲ್ಲರೂ ಸತತ ಪ್ರಯತ್ನದಿಂದ ಹುಡುಕಾಟ ಮಾಡಿದರೂ ಕೀ ಮಾತ್ರ ಸಿಗಲಿಲ್ಲ.

ಮಧ್ಯಾಹ್ನ 2.30 ಕ್ಕೆ ಆರಂಭವಾದ ಈ ಕೀ ಹುಡುಕಾಟ ರಾತ್ರಿ 7.30 ರ ತನಕ ಐದು ಗಂಟೆಗಳ ಕಾಲ ನಡೆದರೂ ಕೀ ಮಾತ್ರ ಸಿಗಲಿಲ್ಲ. ಅಷ್ಟರಲ್ಲಿ ಯುವಕ ಸುಸ್ತಾಗಿದ್ದು, ಇತ್ತ ಈ ದೃಶ್ಯಗಳೆಲ್ಲ ಮೊಬೈಲ್‌ನಲ್ಲಿ ಸೆರೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ವಿಡಿಯೋ ವೈರಲ್‌ ಆಗಿದೆ.

ಕೊನೆಗೂ ಬೇರೆ ದಾರಿ ಕಾಣದೆ ಹುಡುಕಾಟವನ್ನು ರಾತ್ರಿ 7.30 ಕ್ಕೆ ಸದ್ಯಕ್ಕೆ ಸ್ಥಗಿತ ಮಾಡಿ, ಸ್ನೇಹಿತನ ಕಾರನ್ನು ಕಡಬದಲ್ಲೇ ಬಿಟ್ಟು, ಯುವಕ ಅನಿವಾರ್ಯದಿಂದ ಆಟೋ ರಿಕ್ಷಾ ಮಾಡಿಕೊಂಡು ತನ್ನ ಊರಿಗೆ ವಾಪಸ್ ತೆರಳಿದ್ದಾನೆ.

ಸದ್ಯಕ್ಕೆ ಈ ಸುದ್ದಿ ಕಡಬದ ಜನರಿಗೆ ಸ್ವಾರಸ್ಯಕರ ಹರಟೆಯ ವಿಷಯವಾಗಿದ್ದು ಸುಳ್ಳಲ್ಲ.