ಶನಿವಾರ, 24 ಅಕ್ಟೋಬರ್ 2026

ಮಂಗಳೂರು: ವಿವಿಧೆಡೆ ಮೊಸರು ಕುಡಿಕೆ ಉತ್ಸವ, ಪರ್ಯಾಯ ರಸ್ತೆ-ಪೊಲೀಸರ ಸೂಚನೆ

ಮಂಗಳೂರು ನಗರ ಹಾಗೂ ಹೊರವಲಯದ ವಿವಿಧ ಸ್ಥಳಗಳಲ್ಲಿ ಸೆ.5 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವ ನಡೆಯಲಿರುವ ಕಾರಣ ಸಂಜೆ 5 ಗಂಟೆಯಿಂದ ವಾಹನ ದಟ್ಟಣೆ ಉಂಟಾಗಲಿದ್ದು, ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಸೂಚನೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-66ರಲ್ಲಿ ತೊಕ್ಕೊಟ್ಟು ಜಂಕ್ಷನ್ ನಿಂದ ಕೊಲ್ಯ ಜಂಕ್ಷನ್ ವರೆಗೆ ಹಾಗೂ ಉಳ್ಳಾಲ ಅಬ್ಬಕ್ಕ ವೃತ್ತ/ಒಳಪೇಟೆ ಕಡೆಗೆ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

ಪರ್ಯಾಯ ಮಾರ್ಗ:
ತೊಕ್ಕೊಟ್ಟು ಜಂಕ್ಷನ್ ಮೂಲಕ ತಲಪಾಡಿ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು ಜಂಕ್ಷನ್ ನಲ್ಲಿ ಸರ್ವಿಸ್ ರಸ್ತೆಗೆ ಎಡಕ್ಕೆ ತಿರುಗಿ, ದೇರಳಕಟ್ಟೆ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ, ಮಡ್ಯಾರ್, ಮಾಡೂರು,ಬೀರಿಕೋಟೆಕಾರ್ ಜಂಕ್ಷನ್ ಮೂಲಕ ಸಂಚರಿಸಬಹುದು.ತೊಕ್ಕೊಟ್ಟು ಜಂಕ್ಷನ್ ನಿಂದ ಉಳ್ಳಾಲ ಅಬ್ಬಕ್ಕ ವೃತ್ತ ಹಾಗೂ ತೊಕ್ಕೊಟ್ಟು ಒಳಪೇಟೆ ಕಡೆಗೆ ಸಂಚರಿಸುವ ವಾಹನಗಳು ಬೀರಿಕೋಟೆರ್ಕಾ- ಸೋಮೇಶ್ವರ ಮಾರ್ಗವಾಗಿ ಸಂಚರಿಸಬಹುದು.

ಕದ್ರಿ ಶ್ರೀ ಗೋಪಾಲಕೃಷ್ಣ ಮಠ, ಕದ್ರಿ-ಕಂಬಳ ಮೊಸರುಕುಡಿಕೆ
ಬಟ್ಟಗುಡ್ಡೆ ಜಂಕ್ಷನ್ ನಿಂದ ಕದ್ರಿ ಕಂಬಳ-ಭಾರತ್ ಬೀಡಿ ವರೆಗೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

ಪರ್ಯಾಯ ಮಾರ್ಗ: ಬಟ್ಟಗುಡ್ಡೆ ಕಡೆಯಿಂದ ಕದ್ರಿ, ಕಂಬಳ ಕಡೆಗೆ ಸಂಚರಿಸುವ ವಾಹನಗಳು ಬಿಜೈ ಜಂಕ್ಷನ್ -ಪಿಂಟೋ ಬೇಕರಿ-ಕರಂಗಲಪಾಡಿ ಮಾರ್ಗವಾಗಿ ಸಂಚರಿಸಬಹುದು.ಭಾರತ್ ಬೀಡಿ ಕಡೆಯಿಂದ ಬಟ್ಟಗುಡ್ಡೆ ಕಡೆಗೆ ಸಂಚರಿಸುವ ವಾಹನಗಳು ಮಲ್ಲಿಕಟ್ಟೆ- ನಂತೂರು ಮಾರ್ಗವಾಗಿ ಸಂಚರಿಸಬಹುದು.

ಶ್ರೀ ಅರಸು ಮುಂಡತ್ತಾಯ ಮೈದಾನ, ಅತ್ತಾವರ ಮೊಸರುಕುಡಿಕೆ
ಕೋಟಿಚೆನ್ನಯ ವೃತ್ತದಿಂದ ಬಾಬುಗುಡ್ಡೆ-ಅತ್ತಾವರ ಕೆ.ಎಂ.ಸಿ. ರಸ್ತೆ-ಆನಂದ ಶೆಟ್ಟಿ ವೃತ್ತದವರೆಗೆ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

ಪರ್ಯಾಯ ಮಾರ್ಗ:ಕೋಟಿಚೆನ್ನಯ ವೃತ್ತದ ಕಡೆಯಿಂದ ಅತ್ತಾವರ ಕಡೆಗೆ ಸಂಚರಿಸುವ ವಾಹನಗಳು ವೆಲೆನ್ಸಿಯಾ ಮಾರ್ಗವಾಗಿ ಸಂಚರಿಸಬಹುದು.ಅತ್ತಾವರ ಕಡೆಯಿಂದ ಕೋಟಿಚೆನ್ನಯ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ಅತ್ತಾವರ ಆನಂದ ಶೆಟ್ಟಿ ವೃತ್ತದಲ್ಲಿ ಎಡಕ್ಕೆ ತಿರುಗಿ, ಎಸ್.ಎಲ್. ಮಥಾಯಸ್ ರಸ್ತೆ-ಹೈಲ್ಯಾಂಡ್ ಜಂಕ್ಷನ್ ಮೂಲಕ ಸಂಚರಿಸಬಹುದು.

ಶ್ರೀ ಕೃಷ್ಣ ಜ್ಞಾನೋದಯ ಭಜನ ಮಂದಿರ, ಕೊಟ್ಟಾರ ಮೊಸರು ಕುಡಿಕೆ
ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್ ಜಂಕ್ಷನ್ ವರೆಗೆ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ.

ಪರ್ಯಾಯ ಮಾರ್ಗ: ಲಾಲ್ ಬಾಗ್ /ನಾರಾಯಣಗುರು ವೃತ್ತದಿಂದ ಕೊಟ್ಟಾರ ಚೌಕಿ ಕಡೆಗೆ ಸಂಚರಿಸುವ ವಾಹನಗಳು ಕೆ.ಎಸ್.ಆರ್.ಟಿ.ಸಿ.ಕುಂಟಿಕಾನ ಮಾರ್ಗವಾಗಿ ಸಂಚರಿಸಬಹುದು.ಕೊಟ್ಟಾರ ಚೌಕಿ ಕಡೆಯಿಂದ ಲಾಲ್ ಬಾಗ್ ಕಡೆಗೆ ಸಂಚರಿಸುವ ಲಘು ವಾಹನಗಳು ಕುಂಟಿಕಾನ,ಬಿಜೈ,ಕೆ.ಎಸ್. ಆರ್.ಟಿ.ಸಿ. ಮಾರ್ಗವಾಗಿ ಸಂಚರಿಸಬಹುದು.ಕೊಟ್ಟಾರ ಚೌಕಿ ಕಡೆಯಿಂದ ಲಾಲ್ ಬಾಗ್ ಕಡೆಗೆ ಸಂಚರಿಸುವ ಘನ ವಾಹನಗಳು ಕುಂಟಿಕಾನ,ಕೆ.ಪಿ.ಟಿ. ವೃತ್ತ ಮಾರ್ಗವಾಗಿ ಸಂಚರಿಸಬಹುದು.