Home » ದಕ್ಷಿಣ ಕನ್ನಡ: ಗ್ರಾಮೀಣ ಅಂಚೆ ಸೇವಕರ ನೇಮಕಾತಿ-ಕೂಡಲೇ ಅರ್ಜಿ ಸಲ್ಲಿಸಿ

ದಕ್ಷಿಣ ಕನ್ನಡ: ಗ್ರಾಮೀಣ ಅಂಚೆ ಸೇವಕರ ನೇಮಕಾತಿ-ಕೂಡಲೇ ಅರ್ಜಿ ಸಲ್ಲಿಸಿ

0 comments
Jobs

ಮಂಗಳೂರು; ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಕುರಿತಂತೆ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ, ಢಾಕ್‌ ಸೇವಕ್‌ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ನೇಮಕಾತಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಒಂದು ಬಾರಿ ನೋಂದಣಿ ಆ.30 ರಿಂದ ಸೆ.19, ಆನ್‌ಲೈನ್‌ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಸೆ.2 ರಿಂದ 21 ಆಗಿರುತ್ತದೆ. ಅರ್ಜಿಗಳನ್ನು ಆನ್‌ಲೈನ್‌ https://indiapost.gov.in/gdsonlineengagement ಮೂಲಕವೇ ಸಲ್ಲಿಸಬೇಕು.

ಮಂಗಳೂರು ವಿಭಾಗದಲ್ಲಿ ಒಟ್ಟು 28 ಹುದ್ದೆಗಳು ಖಾಲಿ ಇದೆ. ಎಲ್ಲಾ ಹುದ್ದೆಗಳಿಗೆ 10ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು.

ಅಭ್ಯರ್ಥಿಯು ಕನ್ನಡವನ್ನು 10ನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಒಂದು ವಿಷಯವಾಗಿ ಅಧ್ಯಯನ ನಡೆಸಿದವರೂ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ https://indiapostodsonline.gov.in ನಲ್ಲಿ, ಹತ್ತಿರದ ಅಂಚೆ ಕಚೇರಿಗಳನ್ನು ಅಥವಾ ವಿಭಾಗೀಯ ಕಚೇರಿ ಬಲ್ಮಠವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

You may also like