152
ಹಳೆಯಂಗಡಿ: ಇಲ್ಲಿನ ತೋಕೂರು ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಅಷ್ಟಮಿ ಪ್ರಯುಕ್ತ ನಡೆಯುತ್ತಿದ್ದ ಭಜನೆ ಕಾರ್ಯಕ್ರಮದಲ್ಲಿ ಭಜನೆ ಮಾಡುತ್ತಲೇ ಕುಸಿದುಬಿದ್ದ ಯುವಕ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಶುಕ್ರವಾರ (ಸೆ.4) ತಡರಾತ್ರಿ ವರದಿಯಾಗಿದೆ.


ಮೃತರನ್ನು ತೋಕೂರು ನಿವಾಸಿ ಶ್ರೀನಾಥ್ ಶೆಟ್ಟಿಗಾರ್ (38ವ) ಎಂದು ಗುರುತಿಸಲಾಗಿದೆ.
ಶ್ರೀನಾಥ್ ಅವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಅಷ್ಟಮಿ ನಿಮಿತ್ತ ಊರಿಗೆ ಆಗಮಿಸಿದ್ದರು.