ಸೋಮವಾರ, 26 ಅಕ್ಟೋಬರ್ 2026
Trending

ಲಯನ್ಸ್ ಕ್ಲಬ್ ಪಂಪ್‌ವೆಲ್ ಕಲ್ಪವೃಕ್ಷದ ವತಿ: ಆಟಿದ ಒಂಜಿ ದಿನ– ಆಟಿದ ಐಸಿರಿ ಕಾರ್ಯಕ್ರಮ

ಮಂಗಳೂರು: “ಆಟಿ ದ ಒಂಜಿ ದಿನ – ಅಟಿದ ಐಸಿರಿ” ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಪಂಪ್‌ವೆಲ್ ಕಲ್ಪವೃಕ್ಷದ ವತಿಯಿಂದ 15 ಆಗಸ್ಟ್ 2026ರಂದು ಜಪ್ಪಿನಮೊಗರು ಬಲ್ಯಾಯ ಭವನದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಯಿತು.

Sponsored

ಆಟಿ ತಿಂಗಳ ಸಾಂಪ್ರದಾಯಿಕ ಸಂಸ್ಕೃತಿ, ಆಹಾರ ಪದ್ಧತಿ ಮತ್ತು ನಮ್ಮ ಸ್ಥಳೀಯ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಲಯನ್ಸ್ ಹಾಗೂ ಲಿಯೋ ಕ್ಲಬ್‌ನ ಎಲ್ಲಾ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿದ ವಿವಿಧ ಬಗೆಯ ಸಾಂಪ್ರದಾಯಿಕ ಹಾಗೂ ರುಚಿಕರವಾದ ಆಟಿ ತಿಂಗಳ ಆಹಾರ ಪದಾರ್ಥಗಳನ್ನು ತಂದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಕಾರ್ಯಕ್ರಮದ ಅಂಗವಾಗಿ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರಗತಿಪರ ಕೃಷಿಕ ಹಾಗೂ ಸಮಾಜಮುಖಿ ಚಿಂತನೆಯ ಕ್ರಿಯಾಶೀಲ ನಾಯಕರಾದ ಶ್ರೀ ಜಯರಾಮ ಶೆಟ್ಟಿ, ವೇಣೂರು ಅವರನ್ನು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಕ್ಲಬ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಅದೇ ರೀತಿ, ನಿವೃತ್ತ ಅಂಚೆ ನೌಕರರಾದ ಶ್ರೀ ಎಲಿಯಾಸ್ ಡಿಸೋಜಾ ಹಾಗೂ ಅವರ ಧರ್ಮಪತ್ನಿಯವರನ್ನು, ಜಪ್ಪಿನಮೊಗರು ಮತ್ತು ಬಜಾಲ್ ಪ್ರದೇಶಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಲ್ಲಿಸಿದ ಸಮರ್ಪಿತ ಸೇವೆ ಹಾಗೂ ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಗೌರವಿಸಲಾಯಿತು.

ಲಯನ್ಸ್ ಹಾಗೂ ಲಿಯೋ ಕ್ಲಬ್ ಸದಸ್ಯರ ಸಕ್ರಿಯ ಭಾಗವಹಿಸುವಿಕೆ, ಸಹಕಾರ ಮತ್ತು ಬೆಂಬಲದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ನಮ್ಮ ಸ್ಥಳೀಯ ಸಂಸ್ಕೃತಿ, ಪರಂಪರೆ, ಆಹಾರ ವೈವಿಧ್ಯತೆ, ಸಮಾಜ ಸೇವೆ ಹಾಗೂ ಸಹೋದರತ್ವವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕಾರ್ಯಕ್ರಮವು ಎಲ್ಲರಿಗೂ ಅರ್ಥಪೂರ್ಣ ಮತ್ತು ಸ್ಮರಣೀಯ ಅನುಭವವನ್ನು ನೀಡಿತು.