ದೇಶದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ ಇದರ ಕಿಚ್ಚು ವಿದೇಶಕ್ಕೂ ಕೂಡ ತಲುಪಿದೆ. ಇದರ ನಡುವೆ ಅಚ್ಚರಿ ಎಂಬಂತೆ ಇಟಲಿಯ ಪ್ರಧಾನಿ ಮೇಲೋನಿ ಜಾರ್ಜಿಯವರ ಇನ್ಸ್ಟಾ ಪೋಸ್ಟಿಗೆ ಪ್ರಧಾನಿ ಮೋದಿ ಕುರಿತು ಇಲ್ಲಸಲ್ಲದ ಕಾಮೆಂಟ್ಗಳನ್ನು ಮಾಡಲಾಗುತ್ತಿದೆ.
ಇತ್ತೀಚೆಗೆ ಇಟಲಿ ಪ್ರಧಾನಿ ಜಾರ್ಜಿಯಾ ಅವರು ಕೋಪದಲ್ಲಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋಗೆ ಭಾರತದಲ್ಲಿರುವ ಇನ್ಸ್ಟಾಗ್ರಾಮ್ ಬಳಕೆದಾರರು “ನಿಮ್ಮ ಬಾಯ್ಫ್ರೆಂಡ್ ಪ್ರಧಾನಿ ಮೋದಿ ಅವರಿಗೆ ರಿಸೈನ್ ಮಾಡೋಕೆ ಹೇಳಿ, ನಿಮ್ಮ ಸ್ನೇಹಿತನನ್ನು ನಂಬಬೇಡಿ, ಮೋದಿ ಜೊತೆ ಬ್ರೇಕ್ ಅಪ್ ಮಾಡ್ಕೊಳ್ಳಿ, ಇಲ್ಲಿ ಕೇಳಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಲು ನಿಮ್ಮ ಪತಿಗೆ ಹೇಳಿ ” ಎಂದೆಲ್ಲಾ ಬರಪೂರ ಕಾಮೆಂಟ್ಗಳನ್ನು ಮಾಡಿದ್ದಾರೆ.
ಈ ಹಿಂದೆ ಪ್ರಧಾನಿ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ನಡುವಿನ ಸ್ನೇಹ ಹಾಗೂ ‘ಮೆಲೋಡಿ’ ಟ್ರೆಂಡ್‌ಗಳು ಭಾರೀ ವೈರಲ್ ಆಗಿದ್ದವು. ಇದೀಗ ಅದೇ ಸ್ನೇಹವನ್ನು ನೆಪವಾಗಿಟ್ಟುಕೊಂಡು, ಭಾರತದ ವಿದ್ಯಾರ್ಥಿಗಳ ಪರವಾಗಿ ಮಧ್ಯಪ್ರವೇಶಿಸುವಂತೆ ನೆಟ್ಟಿಗರು ಈ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.



