ಸೋಮವಾರ, 26 ಅಕ್ಟೋಬರ್ 2026
Trending

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೆಎಸ್‌ಟಿಡಿಸಿ 2 ದಿನಗಳ ಪ್ರೀಮಿಯಂ ಪ್ಯಾಕೇಜ್‌

Kukke Subramanya

ಬೆಂಗಳೂರು, ಜು.13: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸಿಲಿಕಾನ್‌ ಸಿಟಿಯಿಂದ ಕರಾವಳಿಯ ಅತ್ಯಂತ ಪವಿತ್ರ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ 2 ದಿನಗಳ ಆಕರ್ಷಕ ʼಪ್ರೀಮಿಯಂ ಪ್ರವಾಸ ಪ್ಯಾಕೇಜ್‌ʼ ಅನ್ನು ಪ್ರಕಟ ಮಾಡಿದೆ. ಕಡಿಮೆ ದರದಲ್ಲಿ ಎರಡು ದಿನದ ಪ್ರವಾಸಕ್ಕೆ ಅವಕಾಶ ನೀಡಲಾಗಿದೆ.

Sponsored

ಪ್ರವಾಸದ ಆಕರ್ಷಣೀಯ ಸ್ಥಳಗಳು ಈ ರೀತಿ ಇದೆ:

Advertisement
Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ (ವಿಐಪಿ ಸ್ಪೆಷಲ್‌ ದರ್ಶನ)
ಸೌತಡ್ಕ ಮಹಾಗಣಪತಿ ದೇವಸ್ಥಾನ ಭೇಟಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಆದಿ ಸುಬ್ರಹ್ಮಣ್ಯ ದೇವಸ್ಥಾನ ದರ್ಶನ
ಆದಿಚುಂಚನಗಿರಿ ಕ್ಷೇತ್ರ ಮತ್ತು ಐತಿಹಾಸಿಕ ಮಂಜರಾಬಾದ್‌ ಕೋಟೆ ವೀಕ್ಷಣೆ

2 ದಿನಗಳ ಪ್ರವಾಸ:
ದಿನ 1: ಬೆಂಗಳೂರಿನಿಂದ ಧರ್ಮಸ್ಥಳ ಪ್ರಯಾಣ ಮತ್ತು ದೃಶ್ಯವೀಕ್ಷಣೆ
ಬೆಳಿಗ್ಗೆ 07:00 – ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಟಿಟಿಎಂಸಿ (BMTC TTMC) ಬಸ್ ನಿಲ್ದಾಣದಲ್ಲಿರುವ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್ ಬಳಿ ವರದಿ ಮಾಡಿಕೊಳ್ಳುವುದು.

ಬೆಳಿಗ್ಗೆ 07:30 – ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಎಸಿ ಬಸ್ ಮೂಲಕ ರಸ್ತೆ ಪ್ರಯಾಣ ಆರಂಭ.

ಬೆಳಿಗ್ಗೆ 09:30 – ಮಾರ್ಗಮಧ್ಯೆ ಉಪಹಾರ/ರಿಫ್ರೆಶ್‌ಮೆಂಟ್ ಬ್ರೇಕ್ (ಸ್ವಂತ ವೆಚ್ಚದಲ್ಲಿ).

ಬೆಳಿಗ್ಗೆ 10:30 – ಪವಿತ್ರ ಆದಿಚುಂಚನಗಿರಿ ದೇವಸ್ಥಾನಕ್ಕೆ ಭೇಟಿ ಮತ್ತು ದರ್ಶನ.

ಮಧ್ಯಾಹ್ನ 01:30 – ಮಾರ್ಗಮಧ್ಯೆ ಮಧ್ಯಾಹ್ನದ ಊಟಕ್ಕೆ ನಿಲುಗಡೆ.

ಸಂಜೆ 04:30 – ಹಸನ್ಮುಖಿ ನಿಸರ್ಗದ ಮಡಿಲಲ್ಲಿರುವ ಐತಿಹಾಸಿಕ ಮಂಜರಾಬಾದ್ ಕೋಟೆಗೆ ಭೇಟಿ.

ಸಂಜೆ 06:30 – ಧರ್ಮಸ್ಥಳಕ್ಕೆ (ನಿಡ್ಲೆ) ಆಗಮನ, ಹೋಟೆಲ್‌ಗೆ ಚೆಕ್-ಇನ್ ಮತ್ತು ರಾತ್ರಿ ತಂಗುವಿಕೆ.

ದಿನ 2: ಪುಣ್ಯಕ್ಷೇತ್ರಗಳ ದರ್ಶನ ಮತ್ತು ಮರಳಿ ಬೆಂಗಳೂರಿಗೆ ಪ್ರಯಾಣ
ಬೆಳಿಗ್ಗೆ 07:30 – ಹೋಟೆಲ್‌ನಲ್ಲಿ ಉಚಿತ ಉಪಾಹಾರ ಸೇವನೆ.

ಬೆಳಿಗ್ಗೆ 08:30 – ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಮತ್ತು ವಿಶೇಷ ವಿಐಪಿ ದರ್ಶನ.

ಬೆಳಿಗ್ಗೆ 10:00 – ಸುಂದರ ಶ್ರೀ ರಾಮಮಂದಿರಕ್ಕೆ (ರಾಮ ಕ್ಷೇತ್ರ) ಭೇಟಿ.

ಬೆಳಿಗ್ಗೆ 11:00 – ಸೂರ್ಯನಾರಾಯಣ ದೇವಸ್ಥಾನ ವೀಕ್ಷಣೆ.

ಮಧ್ಯಾಹ್ನ 12:00 – ಬೆಳ್ತಂಗಡಿಯ ಪ್ರಸಿದ್ಧ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ (ಶಿಶಿಲ) ಭೇಟಿ.

ಮಧ್ಯಾಹ್ನ 01:30 – ಮುಕ್ತ ಆವರಣದಲ್ಲಿರುವ ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನಕ್ಕೆ ಭೇಟಿ ಮತ್ತು ಅಲ್ಲಿಯೇ ಮಧ್ಯಾಹ್ನದ ಊಟ.

ಸಂಜೆ 06:00 – ನಾಗದೇವನ ಪವಿತ್ರ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಆದಿ ಸುಬ್ರಹ್ಮಣ್ಯದಲ್ಲಿ ವಿಶೇಷ ದರ್ಶನ.

ಸಂಜೆ 07:30 – ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಾತ್ರಿಯ ಭೋಜನ.

ರಾತ್ರಿ 08:30 – ಎಲ್ಲಾ ದೃಶ್ಯವೀಕ್ಷಣೆ ಮುಗಿಸಿ ಬೆಂಗಳೂರಿನ ಕಡೆಗೆ ಪ್ರಯಾಣ ಆರಂಭ.

ರಾತ್ರಿ 10:30 – ಮಾರ್ಗಮಧ್ಯೆ ರಿಫ್ರೆಶ್‌ಮೆಂಟ್ ಬ್ರೇಕ್.

ದಿನ 3: ಬೆಂಗಳೂರಿಗೆ ಆಗಮನ
ಬೆಳಿಗ್ಗೆ 05:30 – ಬೆಂಗಳೂರಿಗೆ ಆಗಮನ ಮತ್ತು ಕೆಎಸ್‌ಟಿಡಿಸಿ ಪ್ರವಾಸ ಮುಕ್ತಾಯ.

ಪ್ಯಾಕೇಜ್‌ನಲ್ಲಿರುವುದೇನು?
ಎಸಿ ಡಿಲಕ್ಸ್‌ ಬಸ್‌ ಪ್ರಯಾಣ ವೆಚ್ಚ, ದೇವಾಲಯಗಳ ಶೀಘ್ರ ದರ್ಶನ ಟಿಕೆಟ್‌ಗಳು, ಧರ್ಮಸ್ಥಳದಲ್ಲಿ ಉತ್ತಮ ವಸತಿ ಸೌಲಭ್ಯ, ಎರಡು ದಿನದ ಬೆಳಗಿನ ಉಪಹಾರ,

ಯಾವುದು ನೀಡಲಾಗುವುದಿಲ್ಲ?
ಮಧ್ಯಾಹ್ನ ಮತ್ತು ರಾತ್ರಿ ಊಟದ ವೆಚ್ಚಗಳು, ವೈಯಕ್ತಿ ಖರೀದಿ ಮತ್ತು ಇತರ ವೆಚ್ಚಗಳು, ವೇಳಾಪಟ್ಟಿಯಲ್ಲಿ ಉಲ್ಲೇಖ ಮಾಡಲಾದ ಯಾವುದೇ ಹೆಚ್ಚುವರಿ ಸ್ಥಳಗ ಭೇಟಿ.

ಪ್ರವಾಸದ ವೇಳೆ ಅತಿಥಿಗಳು ತಮ್ಮ ತಮ್ಮ ಮಾನ್ಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಜೊತೆಯಲ್ಲಿಡಬೇಕು. ಸಾಂಪ್ರದಾಯಿಕ ವಸ್ತ್ರಸಂಹಿತೆಯನ್ನು ದೇವಸ್ಥಾನದಲ್ಲಿ ಪಾಲಿಸಬೇಕು. ಅನಿರೀಕ್ಷಿತ ವಿಳಂಬಗಳಿಗೆ ಕೆಎಸ್‌ಟಿಡಿಸಿ ಜವಾಬ್ದಾರರಾಗಿರುವುದಿಲ್ಲ.

Advertisement