ಯುವಕನೊಬ್ಬ ಮನೆಯವರು ಕೆಲಸಕ್ಕೆ ಹೋಗು ಎಂದಿದ್ದಕ್ಕೆ ತಪ್ಪಿಸಿಕೊಳ್ಳಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ‘ಹುಲಿ ಬಂದಿದೆ’ ಎಂದು ನಕಲಿ ವಿಡಿಯೋ ಹರಿಬಿಟ್ಟಿದ್ದು, ಈಗ ಅರಣ್ಯ ಇಲಾಖೆ ಕೈಗೆ ತಗಲಾಕೊಂಡಿದ್ದಾನೆ. ಬಳಿಕ ಇಲಾಖೆ ಅಧಿಕಾರಿಗಳು ಆತನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ
Sponsoredಕೊಪ್ಪಳ ತಾಲೂಕಿನ ಕವಳಿ ಗ್ರಾಮದ ಈರಣ್ಣ ಎಂಬ ಯುವಕ, ತೋಟದಲ್ಲಿ ಹುಲಿ ಬಂದಿರುವಂತೆ ಎಐ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನು. ಇದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಪರಿಶೀಲಿಸಿದಾಗ ಇದು ಎಐ ಕೃತ್ಯ ಎಂಬುದು ಬಯಲಾಗಿದೆ. ಸುಳ್ಳು ಸುದ್ದಿ ಹರಡಿ ಭೀತಿ ಹುಟ್ಟಿಸಿದ್ದಕ್ಕೆ ಅಧಿಕಾರಿಗಳು ಯುವಕನಿಗೆ ಸ್ಥಳದಲ್ಲೇ 50 ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.




