ಶನಿವಾರ, 24 ಅಕ್ಟೋಬರ್ 2026

ಹಾಲಿನ ದರದಲ್ಲಿ 8ರೂ ಏರಿಕೆಗೆ KMF ಒಕ್ಕೂಟಗಳ ಪಟ್ಟು

ರಾಜ್ಯದಲ್ಲಿ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವ ನಡುವೆಯೇ ಹಾಲಿನ ದರವನ್ನು ಏರಿಸಬೇಕೆಂದು ಕೆಎಂಎಫ್ ಒಕ್ಕೂಟಗಳು ಪಟ್ಟು ಹಿಡಿದಿದೆ ಎಂದು ವರದಿಗಳು ತಿಳಿಸಿವೆ.

ಹೌದು, ಬೆಂಗಳೂರು ಹಾಲಿನ ಒಕ್ಕೂಟ (BAMUL), ಚಾಮರಾಜನಗರ (ಚಮೂಲ್), ಮಂಡ್ಯ ಹಾಗೂ ತುಮಕೂರು ಹಾಲು ಉತ್ಪಾದಕರ ಒಕ್ಕೂಟಗಳು ಪ್ರತಿ ಲೀಟರ್ ಹಾಲಿನ ದರವನ್ನು 8 ರೂಪಾಯಿ ಹೆಚ್ಚಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿವೆ.

ಈ ಕುರಿತು ಸುದ್ದಿಗೋಷ್ಠಿಯನ್ನು ಕರೆದಿದ್ದು ರೈತರು ಹಾಗೂ ಹಾಲು ಉತ್ಪಾದಕರು ಎದುರಿಸುತ್ತಿರುವ ತೀವ್ರ ಸಂಕಷ್ಟಗಳ ಹಿನ್ನೆಲೆಯಲ್ಲಿ ಈ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹಾಲು ಒಕ್ಕೂಟಗಳು ಸಮರ್ಥಿಸಿಕೊಂಡಿವೆ.