G-GFTHW1YKW0
ಭಾನುವಾರ, 25 ಅಕ್ಟೋಬರ್ 2026
Trending

ಕರಾಯ : ಎರಡು ತಂಡಗಳ ನಡುವೆ ಮಾರಾಮಾರಿ | ಇತ್ತಂಡಗಳಿಂದ ದೂರು

ಉಪ್ಪಿನಂಗಡಿ : ಕರಾಯ ಗ್ರಾಮದ ಕಣ್ಣೀರಿ ಜಂಕ್ಷನ್‌ನಲ್ಲಿ ಆ. 24ರಂದು ರಾತ್ರಿ ತಂಡಗಳೆರಡರ ಮಧ್ಯೆ ಮಾತಿನ ಚಕಮಕಿ ನಡೆದು ಇತ್ತಂಡದವರು ಪರಸ್ಪರ ಹೊಡೆದಾಟ ನಡೆಸಿಕೊಂಡಿರುವ ಬಗ್ಗೆ ವರದಿಯಾಗಿದೆ.

Sponsored

ಕ್ಷುಲ್ಲಕ ಕಾರಣದಿಂದ ಅಶ್ರಫ್ ಹಾಗೂ ಗಫಾರ್ ಎಂಬಿಬ್ಬರ ಗುಂಪುಗಳ ನಡುವೆ ಹೊಡೆದಾಟ ನಡೆದು ಅಶ್ರಫ್ ಮೇಲೆ ೮ ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಇದೇ ಪ್ರಕರಣದಲ್ಲಿ ಗಲ್ಡರ್ ಮೇಲೆ 12ಮಂದಿಯ ತಂಡ ಹಲ್ಲೆ ನಡೆಸಿದೆ ಎಂದೂ ಪೊಲೀಸರಿಗೆ ದೂರು ನೀಡಲಾಗಿದೆ. ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.