ಸೋಮವಾರ, 26 ಅಕ್ಟೋಬರ್ 2026
Trending

ಸ್ವಾತಂತ್ರ್ಯ ದಿನಾಚರಣೆ: ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ವಿತರಣೆ

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ, ನಿಟ್ಟಡೆ ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಡ್ಜ್‌ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಯಿತು.

Sponsored

ಶಾಲೆಯ ವಿದ್ಯಾರ್ಥಿನಿ ಸೃಷ್ಟಿ ಪಿ. ಶೆಟ್ಟಿ ಅವರ ಪೋಷಕರೂ ಹಾಗೂ ಕುಂಭಶ್ರೀ ವೈಭವ ಸಮಿತಿಯ ಉಪಾಧ್ಯಕ್ಷರೂ ಆಗಿರುವ ಶ್ರೀ ಪ್ರಮೋದ್ ಶೆಟ್ಟಿ ಅವರು ಬ್ಯಾಡ್ಜ್‌ಗಳನ್ನು ವಿತರಿಸಿದರು.

Advertisement
Advertisement

ಶಾಲೆಯ ಕಾರ್ಯಕ್ರಮಕ್ಕೆ ಸಹಕಾರ ನೀಡಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ದೇಶಭಕ್ತಿಯ ಮನೋಭಾವ ಮೂಡಿಸಲು ಪ್ರೋತ್ಸಾಹಿಸಿದ ಶ್ರೀ ಪ್ರಮೋದ್ ಶೆಟ್ಟಿ ಅವರಿಗೆ ಶಾಲೆಯ ಆಡಳಿತ ಮಂಡಳಿ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.
ಇವರಿಗೂ ಹಾಗೂ ಇವರ ಕುಟುಂಬದವರಿಗೂ ದೇವರು ಆಯುರಾರೋಗ್ಯ, ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಶಾಲಾ ಆಡಳಿತ ಮಂಡಳಿ ಹಾರೈಸಿದೆ.
“ಶಾಲೆಯೊಂದಿಗೆ ಕೈಜೋಡಿಸುವ ಪ್ರತಿಯೊಬ್ಬರೂ ಮಕ್ಕಳ ಭವಿಷ್ಯ ನಿರ್ಮಾಣದ ಸಹಭಾಗಿಗಳು.”

Advertisement