ಸೋಮವಾರ, 26 ಅಕ್ಟೋಬರ್ 2026
Trending

RC: ವಾಹನ ಮಾರಾಟವಾಗಿಯೂ`RC’ ಬದಲಾಗದಿದ್ದರೆ ಅಪಘಾತದ ಹೊಣೆ ಹಳೇ ಮಾಲೀಕರದ್ದೇ- ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

RC: ವಾಹನ ಮಾರಾಟ ಮಾಡಿದ ಸಂದರ್ಭದಲ್ಲಿ ಅಪಘಾತವೇನಾದರೂ ಆದರೆ ಆರ್‌ಸಿ ಬದಲಾಗದಿದ್ದರೆ ಅಪಘಾತದ ಹೊಣೆಯನ್ನು ವಾಹನದ ಹಳೆ ಮಾಲೀಕರೇ ಹೊರಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

Sponsored

ಯಸ್, ವಾಹನವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದರೂ ಸಹ, ಅಧಿಕೃತವಾಗಿ ನೋಂದಣಿ ಪ್ರಮಾಣಪತ್ರದಲ್ಲಿ (RC) ಹಳೆ ಮಾಲೀಕರ ಹೆಸರಿದ್ದರೆ ಅಥವಾ ಮಾಲೀಕತ್ವ ವರ್ಗಾವಣೆಯಾಗುವವರೆಗೆ ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಹೊಣೆಗಾರಿಕೆಗಳು ನೋಂದಾಯಿತ ಮಾಲೀಕರದ್ದೇ ಆಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:

ಮಾರತಹಳ್ಳಿಯ ಸುನಿಲ್ ಕುಮಾರ್ ಎಂಬುವವರು ತಮ್ಮ ಬೈಕನ್ನು ಶಬ್ರೇಜ್ ಎಂಬುವವರಿಗೆ ಮಾರಾಟ ಮಾಡಿದ್ದರು. ಈ ಬೈಕ್ 2020ರ ಜೂನ್ 18ರಂದು ಹನುಮಂತ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದರು. ಮೃತರ ಕುಟುಂಬದವರು ಪರಿಹಾರ ಕೋರಿ ಮೋಟಾರು ಅಪಘಾತ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠವು, ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ ಮಾಲೀಕತ್ವ ವರ್ಗಾವಣೆಯಾಗದ ಹೊರತು ಮೊದಲ ಮಾಲೀಕನೇ ಹೊಣೆ ಎಂದು ಹೇಳಿದೆ