ಭಾನುವಾರ, 25 ಅಕ್ಟೋಬರ್ 2026
Trending

Monalisa: ಬೇರೇನೂ ಬೇಡ, ದಯವಿಟ್ಟು ನನ್ನ ಮಗಳನ್ನು ನನಗೆ ಮರಳಿ ಕೊಡಿಸಿ- ಬೀದಿಯಲ್ಲಿ ಮೋನಾಲಿಸಾ ತಾಯಿ ಆಕ್ರಂದನ!!

Monalisa: ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ ಬೋಂಸ್ಲೆ ರಾತ್ರೋರಾತ್ರಿ ಫೇಮಸ್ ಆಗಿದ್ದು ಗೊತ್ತೇಯಿದೆ. ತನ್ನ ಸುಂದರ ಕಣ್ಣುಗಳಿಂದಲೇ ಮೋಡಿ ಮಾಡಿ, ಫೇಮಸ್ ಚೆಲುವೆ ಇದೀಗ ದಿಢೀರನೆ ಮದುವೆಯಾಗಿ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ. 6 ತಿಂಗಳಿನಿಂದ ಪ್ರೀತಿಸುತ್ತಿದ್ದ ಮುಸ್ಲಿಂ ಯುವಕ ಫರ್ಮಾನ್ ಎಂಬುವವನ ಜೊತೆ ಪೋಷಕರ ವಿರೋಧದ ನಡುವೆ ಕೇರಳದಲ್ಲಿ ಮೊನಾಲಿಸಾ ಮದುವೆ ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ “ನನ್ನ ಮಗಳನ್ನು ಹೇಗಾದರೂ ಮಾಡಿ ಮರಳಿ ಕರೆತನ್ನಿ” ಎಂದು ತಾಯಿ ಲತಾ ಭೋಂಸ್ಲೆ ಕಣ್ಣೀರಿಡುತ್ತಿದ್ದಾರೆ.

Sponsored

ಮಧ್ಯಪ್ರದೇಶದ ಮಹೇಶ್ವರ ಜೈಲಿನ ಬಳಿಯಿರುವ ತಾತ್ಕಾಲಿಕ ಗುಡಿಸಲಿನಲ್ಲಿ ಮೋನಾಲಿಸಾ ಕುಟುಂಬ ವಾಸಿಸುತ್ತಿದ್ದು, ಮೋನಾಲಿಸಾ ನಟನೆಯ ತರಬೇತಿಗಾಗಿ ಕೇರಳಕ್ಕೆ ಹೋಗಿದ್ದಾಳೆ ಎಂದೇ ಕುಟುಂಬಸ್ಥರು ನಂಬಿದ್ದರು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಅವಳು ಫರ್ಮನ್ ಎಂಬಾತನನ್ನು ಮದುವೆಯಾಗಿರುವ ವಿಷಯ ತಿಳಿದು ಕುಟುಂಬಸ್ಥರಿಗೆ ದಿಕ್ಕು ತೋಚದಂತಾಗಿದ್ದಾರೆ.

ಮಗಳು ಮದುವೆಯಾದ ವಿಚಾರ ಗೊತ್ತಾದ ದಿನದಿಂದ ಮನೆಯಲ್ಲಿ ಒಲೆ ಹಚ್ಚಿಲ್ಲ. ತನ್ನ ಮಗಳ ಫೋಟೋ ಹಿಡಿದು ಎದೆಗೆ ಬಡಿದುಕೊಳ್ಳುತ್ತಾ ಅಳುತ್ತಿರುವ ತಾಯಿ, ನನ್ನ ಮಗಳನ್ನು ನನಗೆ ಮರಳಿ ಕೊಡಿ, ನನಗೆ ಬೇರೇನೂ ಬೇಡ. ಅವಳು ಹೋದರೆ ನನ್ನ ಉಳಿದ ಮಕ್ಕಳಾದ ಜೆಸ್ಸಿಕಾ, ಅಜಯ್ ಮತ್ತು ಆಶಿಶ್ ಅವರ ಗತಿಯೇನು? ಅವಳಿಲ್ಲದೆ ನಾನು ವಿಷ ಕುಡಿದು ಸಾಯುತ್ತೇನೆ,” ಎಂದು ಮಮ್ಮಲ ಮರುಗಿದ್ದಾರೆ. 

ಈ ಕುರಿತು ಹೇಳಿಕೆ ನೀಡಿದ ತಾಯಿ, ನನ್ನ ಮಗಳು ತುಂಬಾ ಮುಗ್ಧೆ. ಆಕೆಗೆ ಏನೋ ನಶೆಯ ಪದಾರ್ಥ ನೀಡಿ, ದಾರಿ ತಪ್ಪಿಸಿ ಈ ಮದುವೆ ಮಾಡಿಸಲಾಗಿದೆ. ಈಗ ಆಕೆಯ ಬಳಿ ಇದ್ದ ಎರಡು ಮೊಬೈಲ್ ಫೋನ್‌ಗಳನ್ನು ಫರ್ಮನ್ ಕಸಿದುಕೊಂಡಿರಬಹುದು ಕೆಲ ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಆಗಿದೆ, ಮನೆಯವರ ಜೊತೆ ಮಾತನಾಡಲು ಆಕೆಯನ್ನು ಬಿಡುತ್ತಿಲ್ಲ. ಒಮ್ಮೆಯಾದರೂ ಆಕೆಯ ಧ್ವನಿ ಕೇಳಿಸಿದರೆ ನನ್ನ ಮನಸ್ಸಿಗೆ ನೆಮ್ಮದಿ ಸಿಗುತ್ತದೆ” ಎಂದು ಬೇಡಿಕೊಂಡಿದ್ದಾರೆ.