ಶ್ರೀಕಷ್ಣ ಜನ್ಮಾಷ್ಟಮಿ ಹಿನ್ನೆಲೆ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದ್ರೆ ಇದು ಕರ್ನಾಟಕದಲ್ಲಿ ಅಲ್ಲ. ಬದಲಿಗೆ ತೆಲಂಗಾಣ ರಾಜ್ಯದಲ್ಲಿ. ಅಲ್ಲಿನ ರಾಜ್ಯ ಸರಕಾರ ತನ್ನ ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹಿಂದೂಗಳು ಬಹಳ ಭಕ್ತಿಯಿಂದ ಆಚರಿಸುವ ಹಬ್ಬವಾದ ಶ್ರೀ ಕೃಷ್ಣಾಷ್ಟಮಿಯ ಗೌರವಾರ್ಥವಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ರಜೆಯನ್ನು ಘೋಷಿಸಿದೆ. ತೆಲಂಗಾಣ ರಾಜ್ಯ ಪೋರ್ಟಲ್‌ನ ಅಧಿಕೃತ ಕ್ಯಾಲೆಂಡರ್ 2026 ರ ಪ್ರಕಾರ, ಶ್ರೀ ಕೃಷ್ಣಾಷ್ಟಮಿಯ ಆಚರಣೆಯನ್ನು ಸೆಪ್ಟೆಂಬರ್ 4 ರ ಶುಕ್ರವಾರ ಆಚರಿಸಲಾಗುತ್ತಿದೆ. ಹೀಗಾಗಿ ಸಾರ್ವತ್ರಿಕ ರಜೆಯನ್ನು ನೀಡಲಾಗಿದೆ.



