ಸೋಮವಾರ, 26 ಅಕ್ಟೋಬರ್ 2026
Trending

ಗುರುವಾಯನಕೆರೆಯಲ್ಲಿ ವಾಹನದ ಟಯರೊಂದು ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆ

ಗುರುವಾಯನಕೆರೆ: ಇಲ್ಲಿಯ ಗುರುವಾಯನಕೆರೆಯಲ್ಲಿ ವಾಹನದ ಟಯರೊಂದು ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಕಾಣುಸುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಒಂದು ಟಯರ್‌ ಮಾತ್ರ ಅರ್ಧ ಮುಳುಗಿದಂತೆ ಕಾಣುತ್ತಿದೆ. ಯಾವುದೋ ವಾಹನ ಮುಳುಗಿರ ಬಹುದೇ ಎಂಬ ಆತಂಕ ಸೃಷ್ಟಿಸಿತ್ತು.

Sponsored

ಅಗ್ನಿಶಾಮಕ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ನಂತರ ಅಗ್ನಿ ಶಾಮಕ ದಳವರು ಕೆರೆಗೆ ಇಳಿದು ಪರಿಶೀಲಿಸಿದಾಗ ಇದು ಖಾಲಿ ಲಾರಿಯ ಟಯರ್ ಎಂದು ತಿಳಿದುಬಂತು. ಯಾರೋ ಲಾರಿಯ ಹಳೇ ಟಯ‌ರ್ ನೀರಿಗೆ ಎಸೆದಿರುವ ಸಾಧ್ಯತೆ ಇದೆ.