ಕರ್ನಾಟಕ ಸರ್ಕಾರ ಸರ್ಕಾರಿ ಶಾಲಾ- ಕಾಲೇಜು, ಸರ್ಕಾರಿ ಕಚೇರಿ ಸ್ಥಳಗಳಲ್ಲಿ ಧರ್ಮಾಧಾರಿತ ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದು, ಮಹತ್ವದ ಬಿಲ್‌ವೊಂದನ್ನು ಜಾರಿ ಮಾಡಲು ಸಕಲ ಸಿದ್ಧತೆ ನಡೆಸಿದೆ.
Sponsoredಹೌದು, ಕರ್ನಾಟಕದಲ್ಲಿ ಆರ್ಎಸ್ಎಸ್ ಕಾರ್ಯಚಟುವಟಿಕೆ ಸೇರಿದಂತೆ ನೋಂದಾವಣೆ ಇಲ್ಲದ ಸಂಘಟನೆಗಳ ಪರೋಕ್ಷವಾಗಿ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ ಬಿಲ್ನ್ನು ಅಧಿವೇಶನದಲ್ಲಿ ಮಂಡಿಸಲು ಸಜ್ಜಾಗಿದೆ.
RSS ಸೇರಿದಂತೆ ಧರ್ಮಾಧಾರಿತ ಸಂಘಟನೆಗಳ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಬಿಲ್ ಇದಾಗಿದೆ. ಸಭೆ, ಸಮಾರಂಭ, ಪಥ ಸಂಚಲನಗಳಿಗೆ ಸರ್ಕಾರದ ಅನುಮತಿ ಕಡ್ಡಾಯವಾಗಲಿದೆ. ಸರ್ಕಾರಿ ಕಚೇರಿ, ಶಾಲೆ-ಕಾಲೇಜು, ಆಟದ ಮೈದಾನ, ಪಾರ್ಕ್, ರಸ್ತೆ, ನದಿ-ಕೆರೆದಡಗಳ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯವಾಗಲಿದೆ. ಗೃಹ ಇಲಾಖೆಯ ಅನುಮತಿ, ಷರತ್ತುಗಳು ಅನ್ವಯವಾಗಲಿವೆ. ಒಟ್ಟಾರೆ ಕರ್ನಾಟಕದಲ್ಲಿ ಆರ್ಎಸ್ಎಸ್ ಸೇರಿದಂತೆ ಕೆಲ ಸಂಘಟನೆಗಳ ಸಾರ್ವಜನಿಕ ಕಾರ್ಯಕ್ರಮ ರೂಪಿಸುವುದನ್ನು ನಿರ್ಬಂಧಿಸಲು ಕಾನೂನು ತರಲು ಸರ್ಕಾರ ಮುಂದಾಗಿದೆ ಅನ್ನೋ ಚರ್ಚೆ ಜೋರಾಗಿದೆ.




