ಸೋಮವಾರ, 26 ಅಕ್ಟೋಬರ್ 2026
Trending

Government Scheme: ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್! ಸಾಲ ಸೌಲಭ್ಯ ಜೊತೆಗೆ ಈ ಯಂತ್ರ ಉಚಿತ!

Government Scheme: ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆ ನಡೆಯುತ್ತಿದೆ.

Government Scheme

Government Scheme: ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆ ನಡೆಯುತ್ತಿದೆ. ಜೊತೆಗೆ ಪುರುಷರು ಕೂಡಾ ಈ ಯೋಜನೆಯ ಲಾಭವನ್ನು ಪಡೆಯಬಹುದು.

Sponsored

ಈಗಾಗಲೇ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಎಂಬ ಯೋಜನೆಯನ್ನು (Government Scheme) ನಡೆಸುತ್ತಿದ್ದು,  ಈ ಯೋಜನೆಯಡಿ, ಹೊಲಿಗೆ ಯಂತ್ರವನ್ನು ಖರೀದಿಸಲು ಒಬ್ಬರು 15,000 ರೂ.ಗಳನ್ನು ಪಡೆಯಬಹುದು. ಈ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೆ, ಸರ್ಕಾರವು ಒಂದು ವಾರದ ಡಿಜಿಟಲ್ ತರಬೇತಿಯನ್ನು ಸಹ ಒದಗಿಸುತ್ತದೆ.

Advertisement

ಹೊಲಿಗೆ ಯಂತ್ರವನ್ನು ಖರೀದಿಸಿದ ನಂತರ, ಕೇಂದ್ರವು ಒಂದು ಲಕ್ಷ ರೂಪಾಯಿಗಳ ಸಾಲವನ್ನು ನೀಡುತ್ತದೆ. ಈ ಸಾಲವನ್ನು 18 ತಿಂಗಳಲ್ಲಿ ಮರುಪಾವತಿ ಮಾಡಬಹುದು. ಸಾಲವನ್ನು ಮರುಪಾವತಿ ಮಾಡಿದ ನಂತರ, ನೀವು ಇನ್ನೂ ಎರಡು ಲಕ್ಷದವರೆಗೆ ಸಾಲ ಪಡೆಯಬಹುದು. ಇದನ್ನು 30 ತಿಂಗಳಲ್ಲಿ ಪಾವತಿಸಬೇಕು.

ಇನ್ನು ಅಂಗಡಿ ತೆರೆಯಲು ಹೊಲಿಗೆ ವಸ್ತುಗಳನ್ನು ಖರೀದಿಸುವವರಿಗೆ ಕೇಂದ್ರ ಸರ್ಕಾರ ಈ ಸಾಲವನ್ನು ನೀಡುತ್ತಿದೆ. ಈ ಸಾಲಗಳ ಮೇಲಿನ ಬಡ್ಡಿ ತುಂಬಾ ಕಡಿಮೆ. ಇದಲ್ಲದೆ, ಕೇಂದ್ರವು ಸಾಲಕ್ಕೆ ಅನ್ವಯವಾಗುವ ಕ್ರೆಡಿಟ್ ಗ್ಯಾರಂಟಿ ಶುಲ್ಕಗಳನ್ನು ಪಾವತಿಸುತ್ತದೆ. ಮಹಿಳೆಯರು ಮಾತ್ರವಲ್ಲದೆ ಪುರುಷರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯ ಲಾಭವನ್ನು ಪಡೆಯಲು ಬೇಕಾಗುವ ಅರ್ಹತೆ:

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು.

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.

ಈಗಾಗಲೇ ಹೊಲಿಗೆ ಮಾಡುತ್ತಿರುವವರು ಮಾತ್ರ ಉಚಿತ ಹೊಲಿಗೆ ಯಂತ್ರ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ, ಟೈಲರ್ ಆಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಯು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಯೋಜನೆಗೆ ಅಗತ್ಯವಿರುವ ದಾಖಲೆಗಳು:

ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್, ವಿಳಾಸ ಪುರಾವೆ, ಗುರುತಿನ ಚೀಟಿ, ಜಾತಿ ಪ್ರಮಾಣಪತ್ರ, ಫೋಟೋ, ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್ಬುಕ್ ಹೊಂದಿರಬೇಕು.

ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

ಮೊದಲನೆಯದಾಗಿ, pmvishwakarma.gov.in ಅಧಿಕೃತ ವೆಬ್ಸೈಟ್ಗೆ ಹೋಗಿ. ಇಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಿ. ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ ನೀವು ಸ್ವೀಕೃತಿಯನ್ನು ಪಡೆಯುತ್ತೀರಿ. ಆ ರಸೀದಿಯನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ. ನಂತರ, ಕೇಂದ್ರವು ಕೆಲವೇ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುತ್ತದೆ. ನಂತರ ನೀವು ಹೊಲಿಗೆ ಯಂತ್ರವನ್ನು ಖರೀದಿಸಬಹುದು.

ಒಂದು ವೇಳೆ ನೀವು ಆನ್ ಲೈನ್ ನಲ್ಲಿ ನೋಂದಾವಣೆ ಮಾಡಲು ಸಾಧ್ಯವಾಗದಿದ್ದರೆ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಕೆ ಮಾಡಬಹುದು.