ಸೋಮವಾರ, 26 ಅಕ್ಟೋಬರ್ 2026
Trending

ಪ್ರಿಯಕರನ ಬಿಡುಗಡೆಗಾಗಿ ಮೊಬೈಲ್‌ ಟವರ್‌ ಏರಿದ ಗೆಳತಿ: ಯುವತಿ ಕೆಳಗಿಳಿಯಲು ಪೊಲೀಸರು ಮಾಡಿದ್ದೇನು?

Image Credit: News9Live

20 ವರ್ಷದ ಯುವತಿಯೋರ್ವಳು ಮೊಬೈಲ್‌ ಟವರ್‌ ಹತ್ತಿ ತನ್ನ ಪ್ರಿಯಕರನ ಬಿಡುಗಡೆಗೆಂದು ಒತ್ತಾಯ ಮಾಡಿದ್ದಾಳೆ. ತನ್ನ ಕುಟುಂಬದವರು ನೀಡಿದ ದೂರಿಗೆ ತನ್ನ ಪ್ರಿಯಕರನನ್ನು ಪೊಲೀಸರು ಬಂಧನ ಮಾಡಿದ್ದು, ಕೂಡಲೇ ಆತನನ್ನು ಬಿಡುಗಡೆ ಮಾಡಬೇಕು ಎನ್ನುವ ಹೈಡ್ರಾಮವನ್ನು ಉಂಟು ಮಾಡಿದ್ದಾಳೆ. ಈ ಘಟನೆ ನಡೆದಿರುವುದು ಬಿಹಾರದ ಗೋಪಾಲ್‌ಗಂಜ್‌ನಲ್ಲಿ.

Sponsored

ಅರ್ಪಿತಾ ಎನ್ನುವ ಯುವತಿ ಸ್ಥಳೀಯ ಯುವಕ ಪವನ್‌ ಚೌಹಾಣ್‌ ಜೊತೆ ಬಹಳ ದಿನದಿಂದ ಪ್ರೀತಿಯಲ್ಲಿದ್ದಳು. ಇವರ ಪ್ರೇಮ ಸಂಬಂಧ ಕುಟುಂಬದವರಿಗೆ ಗೊತ್ತಾಗಿದೆ. ಗುರುವಾರ ಅರ್ಪಿತಾ ಮನೆಯಿಂದ ನಾಪತ್ತೆಯಾಗಿದ್ದು, ಕುಟುಂಬದವರು ಆಕೆಗಾಗಿ ಹುಡುಕಾಟ ಮಾಡಿದಾಗ ಆಕೆ ಸಿಗದೇ ಹೋದಾಗ ಪವನ್‌ ಆಕೆಯನ್ನು ಅಪಹರಿಸಿರಬಹುದು ಎನ್ನುವ ಶಂಕೆಯಿಂದ ಭೋರೆ ಪೊಲೀಸ್‌ ಠಾಣೆಗೆ ಹೋಗಿ ದೂರನ್ನು ದಾಖಲು ಮಾಡಿದ್ದಾರೆ.

ಪೊಲೀಸರು ದೂರಿನನ್ವಯ ಪವನ್‌ನನ್ನು ವಿಚಾರಣೆಗೆಂದು ವಶಕ್ಕೆ ಪಡೆದಿದ್ದಾರೆ. ಇದರಿಂದ ಧೃತಿಗೆಟ್ಟ ಯುವತಿ ಅರ್ಪಿತಾ ಕುಮಾರಿ ಮೊಬೈಲ್‌ ಟವರ್‌ ಏರಿ ಪ್ರಿಯಕರನ ಬಿಡುಗಡೆಗೆ ಆಗ್ರಹ ಮಾಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಬಂದು ಕೆಳಗೆ ಇಳಿಯುವಂತೆ ಅರ್ಪಿತಾಗೆ ಒತ್ತಾಯ ಮಾಡಿದ್ದಾರೆ. ಆದರೆ ಅರ್ಪಿತಾ ಆಕೆ ಕೆಳಗೆ ಇಳಿಯಲು ನಿರಾಕರಿಸಿದ್ದಾಲೆ. ತನ್ನ ಗೆಳೆಯ ಪವನ್‌ನನ್ನು ಬಿಡುಗಡೆ ಮಾಡಬೇಕು ಮತ್ತು ಇಬ್ಬರಿಗೂ ಮದುವೆಯಾಗಲು ಅವಕಾಶ ನೀಡಬೇಕು ಎಂದು ಒತ್ತಾಯ ಮಾಡಿದ್ದಾಳೆ.

ಪೊಲೀಸರು, ಗ್ರಾಮಸ್ಥರು ಎಷ್ಟೇ ವಿನಂತಿ ಮಾಡಿದರೂ ಅರ್ಪಿತಾ ಟವರ್‌ನಿಂದ ಕೆಳಗೆ ಇಳಿಯಲಿಲ್ಲ. ಕೊನೆಗೆ ಪೊಲೀಸರು ಕೈಕೋಳದಲ್ಲಿ ಪವನ್‌ನನ್ನು ಸ್ಥಳಕ್ಕೆ ಕರೆತಂದಿದ್ದಾರೆ. ಅವನನ್ನು ನೋಡಿದ ಬಳಿಕವೇ ಅರ್ಪಿತಾ ಕೆಳಗೆ ಇಳಿದಿದ್ದಾಳೆ.

ನಂತರ ಅರ್ಪಿತಾ ಕುಟುಂಬ ಪೊಲೀಸ್‌ ಠಾಣೆಗೆ ಬಂದು ಮನೆಗೆ ಮರಳಲು ಮನವೊಲಿಸಿದ್ದಾರೆ. ಆದರೆ ಆಕೆ ನಿರಾಕರಿಸಿ ಪವನ್‌ ಜೊತೆ ಮದುವೆ ಆಗಲು ಒಪ್ಪಿಗೆ ಸೂಚಿಸುವಂತೆ ಒತ್ತಾಯಿಸಿದ್ದಾಳೆ. ಆದರೆ ಆಕೆಯ ಕುಟುಂಬ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಎರಡೂ ಕಡೆಯವರಿಗೆ ಪೊಲೀಸರು ಸಂಧಾನ ಮಾಡುವ ಕೆಲಸ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

https://www.instagram.com/reel/DVnPWiQE62B/?utm_source=ig_embed&ig_rid=83d7b51f-5ccd-44f6-b4e7-979cf60feba3