ನೆಚ್ಚಿನ ತಾಣವಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಗಡಾಯಿಕಲ್ಲು ನಾಳೆಯಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ. ಪ್ರವಾಸ ಕೈಗೊಳ್ಳುವ ಮುನ್ನ ಈ ಕೆಳಗಿನ ಪ್ರಮುಖ ಅಂಶಗಳನ್ನು ಗಮನಿಸುವುದು ಕಡ್ಡಾಯವಾಗಿದೆ.
ದಿನಕ್ಕೆ 500 ಜನರಿಗೆ ಮಾತ್ರ ಅವಕಾಶ
ಪರಿಸರದ ಮೇಲಿನ ಒತ್ತಡ ನಿಯಂತ್ರಿಸಲು ಒಂದು ದಿನಕ್ಕೆ ಕೇವಲ 500 ಪ್ರವಾಸಿಗರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಆನ್‌ಲೈನ್ ನೋಂದಣಿ ಕಡ್ಡಾಯ:
ಚಾರಣಕ್ಕೆ ಹೋಗಬಯಸುವವರು ಅರಣ್ಯ ಇಲಾಖೆಯ ಅಧಿಕೃತ ವೆಬಸೈಟ್ kudremukhanationalpark.in ಮುಂಚಿತವಾಗಿ ಪ್ರೀ-ರಿಜಿಸ್ಟ್ರೇಷನ್ (Pre-registration) ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಪ್ರವೇಶದ ಸಮಯ:
ಬೆಳಗ್ಗೆ 7:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಮಾತ್ರ ಗಡಾಯಿಕಲ್ಲು ಏರಲು ಅವಕಾಶವಿರುತ್ತದೆ.ಒಂದು ವೇಳೆ ಮಧ್ಯಾಹ್ನ 1:00 ಗಂಟೆಯ ಒಳಗಾಗಿಯೇ 500 ಜನರ ಕೋಟಾ ಪೂರ್ಣಗೊಂಡರೆ, ತಕ್ಷಣವೇ ಪ್ರವೇಶ ದ್ವಾರವನ್ನು ಮುಚ್ಚಲಾಗುತ್ತದೆ.
ಗುರುತಿನ ಚೀಟಿ ಕಡ್ಡಾಯ:
ಚಾರಣದ ಆರಂಭಿಕ ತಪಾಸಣಾ ಕೇಂದ್ರದಲ್ಲಿ ಪ್ರತಿಯೊಬ್ಬರೂ ತಮ್ಮ ಅಧಿಕೃತ identity card (ಆಧಾರ್ ಕಾರ್ಡ್, ವೋಟರ್ ಐಡಿ ಇತ್ಯಾದಿ) ಅನ್ನು ತೋರಿಸುವುದು ಕಡ್ಡಾಯವಾಗಿದೆ ಎಂದು ಅರಣ್ಯ ಇಲಾಖೆ ವನ್ಯ ಜೀವಿ ವಿಭಾಗ ವಲಯ ಅರಣ್ಯಧಿಕಾರಿ ಶರ್ಮಿಷ್ಠ ತಿಳಿಸಿದ್ದಾರೆ.
ಆಫ್‌ಲೈನ್ ಪಾವತಿ ಮಾತ್ರ:
ಆನ್‌ಲೈನ್‌ನಲ್ಲಿ ಕೇವಲ ನೋಂದಣಿ ಮಾತ್ರ ಮಾಡಿಕೊಳ್ಳಬೇಕಾಗಿದ್ದು, ಪ್ರವೇಶ ಶುಲ್ಕದ ಹಣವನ್ನು ಸ್ಥಳದಲ್ಲೇ ನಗದು ರೂಪದಲ್ಲಿ (Offline) ಪಾವತಿಸಬೇಕಿರುತ್ತದೆ.



