ಭಾನುವಾರ, 25 ಅಕ್ಟೋಬರ್ 2026
Trending

ಇನ್ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಶನಿವಾರವೂ ಫುಲ್ ಡೇ ಕ್ಲಾಸ್!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ಮುಂದೆ ಶಾಲಾ ಕಾಲೇಜುಗಳಿಗೆ ಪ್ರತಿ ಶನಿವಾರವು ಸಂಜೆಯವರೆಗೂ ತರಗತಿಗಳನ್ನು ನಡೆಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಮಹತ್ವದ ಆದೇಶ ಹೊರಡಿಸಿದ್ದಾರೆ.

Sponsored

ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಸತತ ರಜೆಗಳನ್ನ ನೀಡಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ಹಿಂದುಳಿದಿರುವ ಪಠ್ಯಕ್ರಮವನ್ನ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಮಹತ್ವದ ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಶಾಲೆಗಳು, ಅಂದರೆ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೆಪ್ಟೆಂಬರ್ ಎರಡನೇ ವಾರದಿಂದ, ಅಂದರೆ ಸೆಪ್ಟೆಂಬರ್ 12ರಿಂದ ಪ್ರತಿ ಶನಿವಾರದಂದು ಪೂರ್ಣಾವಧಿ ತರಗತಿಗಳನ್ನ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮಾರ್ಗಸೂಚಿಯ ಪ್ರಕಾರ, ಬರುವ ವಾರಾಂತ್ಯಗಳನ್ನ ಹಾಗೂ ಸಾರ್ವಜನಿಕ ರಜಾದಿನಗಳನ್ನ ಸದ್ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಸಾಮಾನ್ಯವಾಗಿ ಶನಿವಾರದಂದು ಶಾಲೆಗಳು ಅರ್ಧ ದಿನ ಮಾತ್ರ ಕಾರ್ಯನಿರ್ವಹಿಸುತ್ತವೆ. ಆದರೆ ನೂತನ ಶಿಕ್ಷಣ ಇಲಾಖೆ ಆದೇಶದ ಪ್ರಕಾರ, ಸೆಪ್ಟೆಂಬರ್ 12 ಅಂದರೆ ಇಂದಿನಿಂದ ಶಾಲಾ ಆಡಳಿತ ಮಂಡಳಿಗಳು ಶನಿವಾರದಂದು ಸಂಪೂರ್ಣ ದಿನದ ಶೈಕ್ಷಣಿಕ ವೇಳಾಪಟ್ಟಿಯನ್ನ ಅನುಸರಿಸಬೇಕು. ಜೊತೆಗೆ, ಅಗತ್ಯವಿದ್ದರೆ ಉಳಿದಿರುವ ಸಾಮಾನ್ಯ ರಜಾದಿನಗಳನ್ನ ಸಹ ಬಳಸಿಕೊಂಡು ವಿಶೇಷ ತರಗತಿಗಳನ್ನ ಆಯೋಜಿಸುವ ಮೂಲಕ ನಷ್ಟವಾಗಿರುವ ಪಠ್ಯದ ಅವಧಿಯನ್ನ ಸರಿದೂಗಿಸಲು ಸೂಚಿಸಲಾಗಿದೆ.