ಮಂಗಳೂರು: ವಿಶ್ವವಿಖ್ಯಾತ ರ್ಯಾಂಬೋ ಸರ್ಕಸ್ ಬಹುಜನರ ಅಪೇಕ್ಷೆ ಮೇರೆಗೆ ಮಂಗಳೂರಿನಲ್ಲಿ ನಡೆಯುತ್ತಿದೆ. ಮೊದಲ ಬಾರಿಗೆ ಹವಾನಿಯಂತ್ರಿತ ಸಭಾಂಗಣದಲ್ಲಿ ಈ ಶೋ ನಡೆಯಲಿದೆ.
Sponsoredಮಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಡಾ.ಟಿ.ಎಂ.ಎ.ಪೈ ಕನ್ವೆನ್ಶನ್ ಸಭಾಂಗಣದಲ್ಲಿ ರ್ಯಾಂಬೋ ಸರ್ಕಸ್ ನಡೆಯಲಿದೆ. ಈ ಬಾರಿ ಲೇಸರ್‌ಮ್ಯಾನ್ ಶೋ ಇರಲಿದೆ. ಆ.22,23,26,27,28,29,30, ಸೆ.4,5,6 ರ ವರೆಗೆ ಶೋ ನಡೆಯಲಿದೆ. ಪ್ರತಿದಿನ ಎರಡು ಶೋಗಳು ಸಂಜೆ 5.30 ಮತ್ತು ರಾತ್ರಿ 8 ಗಂಟೆಗೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
Marriage AdSponsoredಬಬಲ್‌ಶೋ, ಸ್ಕೇಟಿಂಗ್, ಲ್ಯಾಡರ್‌ಬ್ಯಾಲೆನ್ಸ್, ಸ್ವೋರ್ಡ್ ಆಕ್ಟ್, ಕ್ಯೂಬ್ ಜಗ್ಲಿಂಗ್, ರೊಲ್ಲಾ ಬೊಲ್ಲಾ, ಏರಿಯಲ್ ರೋಪ್ ಜೊತೆಗೆ ಅನೇಕ ಮನರಂಜನಾತ್ಮಕ ಆಟಗಳು ಇರಲಿದೆ.
ಎಲ್‌ಇಡಿ ಲೇಸರ್‌ಮ್ಯಾನ್ ಶೋ ಮತ್ತು ಎಲ್‌ಇಡಿ ಲೇಸರ್ ಡ್ಯಾನ್ಸ್ ಮೊದಲ ಬಾರಿಗೆ ಭಾರತದಲ್ಲಿ ರ್ಯಾಂಬೋ ಸರ್ಕಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ.




