ಶನಿವಾರ, 24 ಅಕ್ಟೋಬರ್ 2026

ಹಿಂಸಾಚಾರ ಬಿಟ್ಟು, ಸೀರೆ ತೊಟ್ಟು ರ‍್ಯಾಂಪ್ ವಾಕ್ ಮಾಡಿದ ಮಾಜಿ ನಕ್ಸಲ್ ಸುಂದರಿಯರು’

ಶಸ್ತ್ರಾಸ್ತ್ರ ಹಿಡಿದು ಹೋರಾಟ ನಡೆಸುತ್ತಿದ್ದ ಮಾಜಿ ನಕ್ಸಲ್ ಮಹಿಳೆಯರು ಇಂದು ಸಮಾಜದ ಮುಖ್ಯ ಭಾಗವಾಗಿ ರಾಯ್ ಪುರದಲ್ಲಿ ಆಯೋಜನೆ ಮಾಡಲಾಗಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಂದರ್ಭದಲ್ಲಿ ಕೈಮಗ್ಗ ಉಡುಪುಗಳನ್ನು ಧರಿಸಿ ಈ ಮಹಿಳೆಯರು ರ‍್ಯಾಂಪ್ ವಾಕ್ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಬಸ್ತಾರ್‌ನಲ್ಲಿ ಸಶಸ್ತ್ರ ದಂಗೆಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಬರುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಹಿಂಸಾಚಾರ ತೊರೆದು ಮುಖ್ಯವಾಹಿನಿಗೆ ಬಂದ ಮಹಿಳೆಯರ ಜೀವನದ ಬದಲಾವಣೆ ಮತ್ತು ಅವರ ಆತ್ಮವಿಶ್ವಾಸವನ್ನು ತೋರಿಸುವುದು ಇದರ ಉದ್ದೇಶವಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದು ಬಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಜೆಪಿಯ ಎಕ್ಸ್ ಹ್ಯಾಂಡಲ್ ಮತ್ತು ಎಎನ್‌ಐ ಈ ಕಾರ್ಯಕ್ರಮದ ವಿಡಿಯೊ ಹಂಚಿಕೊಂಡಿದೆ. ಅವರ ಹಿಂದಿನ ನಡವಳಿಕೆ ಮತ್ತು ಪ್ರಸ್ತುತ ಬದಲಾವಣೆಗಳು ಆನ್‌ಲೈನ್‌ನಲ್ಲಿ ತ್ವರಿತವಾಗಿ ಗಮನ ಸೆಳೆದಿದೆ. ಸಮಾಜದ ಮುಖ್ಯವಾಹಿನಿಗೆ ಬಂದ ಈ ಮಹಿಳೆಯರು, ಸೀರೆ ಉಟ್ಟು ವೃತ್ತಿಪರರಂತೆ ಹೆಜ್ಜೆ ಹಾಕಿದರು. ಇವರ ನಗು ಮತ್ತು ಆತ್ಮವಿಶ್ವಾಸದ ನಡಿಗೆಗೆ ಕಾರ್ಯಕ್ರಮದಲ್ಲಿದ್ದ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ವೈರಲ್ ವಿಡಿಯೊದಲ್ಲಿ ನಕ್ಸಲ್ ಚಳುವಳಿಯೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯರು ರ‍್ಯಾಂಪ್ ವಾಕ್ ಮಾಡುತ್ತ ಭಾರತೀಯ ಕೈಮಗ್ಗದ ಸಾರ್ವಜನಿಕ ಆಚರಣೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://x.com/i/status/2087792317780693414